ಕೋಮು ಗಲಭೆಯಲ್ಲಿ ಮೃತಪಟ್ಟಪರೇಶ ಮೇಸ್ತ ಮನೆಗೆ ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪರೇಶ ಮೇಸ್ತ ಸಾವಿನ ತನಿಖೆಯನ್ನು ಸಿಬಿಐ ನಡೆಸಲಿದೆ ಎಂದು ಭರವಸೆ ತುಂಬಿದರು.

ಹೊನ್ನಾವರ: ಕೋಮು ಗಲಭೆಯಲ್ಲಿ ಮೃತಪಟ್ಟಪರೇಶ ಮೇಸ್ತ ಮನೆಗೆ ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪರೇಶ ಮೇಸ್ತ ಸಾವಿನ ತನಿಖೆಯನ್ನು ಸಿಬಿಐ ನಡೆಸಲಿದೆ ಎಂದು ಭರವಸೆ ತುಂಬಿದರು.

ಮೇಸ್ತ ಅವರ ಮನೆಯಲ್ಲಿ 20 ನಿಮಿಷಗಳ ಕಾಲ ಕಳೆದ ಶಾ,ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮವಿಶ್ವಾಸ ಮೂಡಿಸಿದರು.

‘ತನಿಖೆಯನ್ನು ಸಿಬಿಐ ನಡೆಸಲಿದೆ. ಸಿಬಿಐನ ಎಸ್‌ಪಿ ಮಟ್ಟದ ಅಧಿಕಾರಿಯಿಂದ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ. ನಿಮ್ಮ ಕುಟುಂಬಕ್ಕೆ ಉದ್ಯೋಗ ನೀಡುವ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ’ ಎಂದು ತಂದೆ ಕಮಲಾಕರ ಮೇಸ್ತ ಅವರಿಗೆ ಶಾ ಭರವಸೆ ನೀಡಿದರು. ಶಾ ಅವರನ್ನು ನೋಡಿ ಮೇಸ್ತ ತಂದೆ ಗದ್ಗದಿತರಾದರು.