ಗರ್ಭಿಣಿಯಾದದ್ದಕ್ಕೆ ಮನೆಯಿಂದ ಹೊರಹಾಕಲ್ಪಟ್ಟ 17 ವರ್ಷದ ಯುವತಿಯೊಬ್ಬಳು ರಸ್ತೇಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಜಾರ್ಖಂಡ್ ರಾಜ್ಯದ ಚಾಂಡಿಲ್ ನಗರದಲ್ಲಿ ನಡೆದಿದೆ.
ರಾಂಚಿ: ಗರ್ಭಿಣಿಯಾದದ್ದಕ್ಕೆ ಮನೆಯಿಂದ ಹೊರಹಾಕಲ್ಪಟ್ಟ 17 ವರ್ಷದ ಯುವತಿಯೊಬ್ಬಳು ರಸ್ತೇಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಜಾರ್ಖಂಡ್ ರಾಜ್ಯದ ಚಾಂಡಿಲ್ ನಗರದಲ್ಲಿ ನಡೆದಿದೆ.
ಕಳೆದ ಶನಿವಾರ ಘಟನೆ ನಡೆದಿದ್ದು, ರಸ್ತೆ ಮಧ್ಯದಲ್ಲೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನೂ ಕರುಳಬಳ್ಳಿ ಹಾಗೆನೇ ಇದ್ದು, ವಾಹನಗಳು ಆಕೆಯ ಅಕ್ಕಪಕ್ಕದಲ್ಲೇ ಓಡಾಡುತ್ತಿರುವ ದೃಶ್ಯ ಮೊಬೈಲ್’ನಲ್ಲಿ ಸೆರೆಯಾಗಿದೆ.

ಆ ಯುವತಿ ಆರೋಗ್ಯ ಕೇಂದ್ರದಿಂದ ಕೇವಲ 100 ಮೀ. ನಷ್ಟು ದೂರದಲ್ಲಿದ್ದರೂ, ವೈದ್ಯರಾಗಲಿ, ನರ್ಸ್’ಗಳಾಗಲಿ ಆಕೆಯ ನೆರವಿಗೆ ಬಂದಿಒಲ್ಲವೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕೊನೆಗೆ ಸ್ಥಳೀಯರು ಸೇರಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
