ನಾಳೆ ಹಸೆಮಣೆ ಏರಬೇಕಿದ್ದ ನವ ವಧುವೊಬ್ಬಳು ಮದುವೆ ಮನೆಯಿಂದಲೇ ರಾತ್ರೋ ರಾತ್ರಿ ಪರಾರಿಯಾಗಿದ್ದಾಳೆ.  ದ.ಕ ಜಿಲ್ಲೆಯ ಮೂಡಬಿದ್ರೆಯಲ್ಲಿ   ಈ ಘಟನೆ ನಡೆದಿದ್ದು, ಮನೆಯವರು ಲವ್​ ಜಿಹಾದ್​​ಗೆ ಯುವತಿ ಬಲಿಯಾಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಡಿ.10): ನಾಳೆ ಹಸೆಮಣೆ ಏರಬೇಕಿದ್ದ ನವ ವಧುವೊಬ್ಬಳು ಮದುವೆ ಮನೆಯಿಂದಲೇ ರಾತ್ರೋ ರಾತ್ರಿ ಪರಾರಿಯಾಗಿದ್ದಾಳೆ. ದ.ಕ ಜಿಲ್ಲೆಯ ಮೂಡಬಿದ್ರೆಯಲ್ಲಿ ಈ ಘಟನೆ ನಡೆದಿದ್ದು, ಮನೆಯವರು ಲವ್​ ಜಿಹಾದ್​​ಗೆ ಯುವತಿ ಬಲಿಯಾಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ಮನೆಯಲ್ಲಿ ಮೆಹಂದಿ ಕಾರ್ಯಕ್ರಮವಿತ್ತು. ಮುನ್ನಾ ದಿನ ಊಟದ ಬಳಿಕ ಜ್ಯೂಸ್ ನಲ್ಲಿ ಅಮಲು ಪದಾರ್ಥ ಸೇರಿಸಿ ಯುವತಿ ಮನೆಯವರಿಗೆ ಕೊಟ್ಟಿದ್ದಾಳೆ. ಬಳಿಕ ಅವರು ನಿದ್ದೆಗೆ ಜಾರುತ್ತಿದ್ದಂತೆ ಚಿನ್ನಾಭರಣ, ನಗದು ಮತ್ತು ಐಡಿ ಕಾರ್ಡ್ ದಾಖಲೆ ಸಹಿತ ಮದುವೆ ಮನೆಯಿಂದಲೇ ಪರಾರಿಯಾಗಿದ್ದಾಳೆ. ಯುವತಿಗೆ ವಿದೇಶದಲ್ಲಿರುವ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಸಹೋದರ ಮೂಡು ಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

ಯುವತಿ ಕೆಲ ದಿನಗಳ ಹಿಂದೆಯೇ ಪರಂಗಿಪೇಟೆ ನಿವಾಸಿ ಹೈದರ್ ಎಂಬಾತನ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಇದು ಲವ್​ ಜಿಹಾದ್ ಎಂದು ಮನೆಯವರು ಮತ್ತು ಹಿಂದೂ ಸಂಘಟನೆಗಳ ಮುಖಂಡರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸರು ಕ್ರಮ ಕೈಗೊಂಡು, ಸೂಕ್ತ ತನಿಖೆ ನಡೆಸದಿದ್ದರೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.