10ನೇ ತರಗತಿ ವಿದ್ಯಾರ್ಥಿ ಹಾಗೂ ಆಕೆಯ ಸಹೋದರ ಸಿರಿಂಜ್‌ನಿಂದ ತಮ್ಮ ದೇಹದ ರಕ್ತವನ್ನು ಎಳೆದುಕೊಂಡು, ಆ ರಕ್ತವನ್ನು ಬಳಸಿ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.

ಘಾಜೀಬಾದ್(ಜ.06): ಎಸ್‌'ಪಿಯಲ್ಲಿ ತಂದೆ ಮಗನ ನಡುವೆಯೇ ಬಿರುಕು ಉಂಟಾಗಿದ್ದು, ಈ ಆಘಾತಕಾರಿ ಬೆಳವಣಿಗೆ ಸಾಮಾನ್ಯ ಜನರ ಮೇಲೂ ಸಾಕಷ್ಟು ಪ್ರಭಾವ ಬೀರಿದೆ. ಇದಕ್ಕೆ ಉದಾಹರಣೆ ಎಂಬತೆ, ಪಕ್ಷದ ಸೈಕಲ್ ಚಿಹ್ನೆಯನ್ನು ಸಿಎಂ ಅಖಿಲೇಶ್ ಯಾದವ್ ಅವರಿಗೆ ನೀಡಬೇಕೆಂದು ಕೋರಿ 15 ವರ್ಷದ ಬಾಲಕಿಯೊಬ್ಬಳು ಚುನಾವಣಾ ಆಯೋಗಕ್ಕೆ ತನ್ನ ರಕ್ತದಿಂದ ಪತ್ರ ಬರೆದ ವಿಚಿತ್ರ ಘಟನೆ ನಡೆದಿದೆ.

10ನೇ ತರಗತಿ ವಿದ್ಯಾರ್ಥಿ ಹಾಗೂ ಆಕೆಯ ಸಹೋದರ ಸಿರಿಂಜ್‌ನಿಂದ ತಮ್ಮ ದೇಹದ ರಕ್ತವನ್ನು ಎಳೆದುಕೊಂಡು, ಆ ರಕ್ತವನ್ನು ಬಳಸಿ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.

ಪತ್ರವನ್ನು ಆಯೋಗಕ್ಕೆ ಪೋಸ್ಟ್ ಮಾಡಲು ಹೋದಾಗ ತಂದೆ ತಡೆದಿದ್ದಾರೆ. ‘‘ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿರಾಗಬೇಡಿ, ವಿದ್ಯಾಭ್ಯಾಸದ ಕಡೆ ಗಮನಹರಿಸಿ,’’ ಎಂದು ಮಕ್ಕಳಿಗೆ ಸಲಹೆ ನೀಡಿದ್ದೇನೆ, ಆಖಿಲೇಶ್ ಅವರ ಲ್ಯಾಪ್‌ಟಾಪ್ ಯೋಜನೆಯಿಂದ ಪ್ರಭಾವಿರಾದ ಮಕ್ಕಳು, ಅವರ ಗಮನ ಸೆಳೆಯಲು ಇಂತಹ ಪ್ರಯತ್ನ ಮಾಡಿದ್ದಾರೆ ಎಂದು ತಂದೆ ತಿಳಿಸಿದ್ದಾರೆ.