ಇದೇ ಹಿನ್ನಲೆಯಲ್ಲಿ ಕೆಲವು ಮಂದಿ ಜನರನ್ನು ಹಾದಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮದುವೆ-ಮುಂಜಿ ಕಾರ್ಯಕ್ರಮ ಇರುವವರು ಪೊಲೀಸ್ ಅನುಮತಿಯ ಮೇಲೆ 5 ಲಕ್ಷ ರೂ ವರೆಗೆ ಹಣವನ್ನು ಬ್ಯಾಂಕಿನಿಂದ ಹಿಂಪಡೆಯಬಹುದು ಎಂಬ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ. 

ನವದೆಹಲಿ(ನ.15): ದೇಶದಲ್ಲಿ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಸರಕಾರ ರದ್ದು ಮಾಡಿರುವ ಹಿನ್ನಲೆಯಲ್ಲಿ ಜನ ಸಾಮಾನ್ಯರ ದಿನ ನಿತ್ಯದ ಖರ್ಚು ವೆಚ್ಚಕ್ಕೂ ಕೈಯಲ್ಲಿ ಕಾಸಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 

ಇದೇ ಹಿನ್ನಲೆಯಲ್ಲಿ ಕೆಲವು ಮಂದಿ ಜನರನ್ನು ಹಾದಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮದುವೆ-ಮುಂಜಿ ಕಾರ್ಯಕ್ರಮ ಇರುವವರು ಪೊಲೀಸ್ ಅನುಮತಿಯ ಮೇಲೆ 5 ಲಕ್ಷ ರೂ ವರೆಗೆ ಹಣವನ್ನು ಬ್ಯಾಂಕಿನಿಂದ ಹಿಂಪಡೆಯಬಹುದು ಎಂಬ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ನಿಮ್ಮ ಎರಿಯಾದ ಡಿಎಸ್'ಪಿ ಅನುಮತಿಯನ್ನು ನೀಡಿದರೆ ನೀವು 5 ಲಕ್ಷದ ವರೆಗಿನ ಹಣವನ್ನು ಬದಲಾಯಿಸಿಕೊಳ್ಳಿ, ಇಲ್ಲ ಬ್ಯಾಂಕಿನಿಂದ ಹಿಂಪಡೆಯಬಹುದಾಗಿದೆ ಎನ್ನುವ ಮೆಸೇಜ್ ಗಳನ್ನು ಹರಿ ಬಿಡುತ್ತಿದ್ದಾರೆ. ಇದಕ್ಕೆ ದೆಹಲಿಯ ಉತ್ತರ ವಲಯದ ಡಿಸಿಪಿ ಈ ಕುರಿತಂತೆ ಟ್ವೀಟ್ ಮಾಡಿದ್ದು, ಈ ರೀತಿಯಲ್ಲಿ ಯಾವುದೇ ಸೌಲಭ್ಯಗಳು ಜಾರಿಯಲ್ಲಿ ಇಲ್ಲವೆಂದು ತಿಳಿಸಿದ್ದಾರೆ. 

ಇಂದೊಂದು ರೂಮರ್ ಆಗಿದ್ದು, ಯಾರು ಇಂತಹ ರೂಮರ್ ಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ. 

Scroll to load tweet…