Asianet Suvarna News Asianet Suvarna News

ಐಸಿಐಸಿಐ ಬ್ಯಾಂಕ್'ನಿಂದ ಹೊಸ ಸ್ಕೀಂ; ಎಟಿಎಂನಲ್ಲೇ 15 ಲಕ್ಷ ಸಾಲದ ಆಫರ್

* ಎಟಿಎಂ ಮೂಲಕವೇ 15 ಲಕ್ಷ ರು. ವೈಯಕ್ತಿಕ ಸಾಲ
* ಎಟಿಎಂನಲ್ಲಿ ಹಣ ವಹಿವಾಟು ಮುಗಿದಾಕ್ಷಣವೇ ಸಾಲಕ್ಕೆ ಅರ್ಹತೆ ಇದ್ದರೆ ಮಾಹಿತಿ
* ಎಟಿಎಂನಲ್ಲಿ ಕೇಳಲಾದ ಮಾಹಿತಿ ದಾಖಲಿಸಿದರೆ ಕೆಲವೇ ಕ್ಷಣಗಳಲ್ಲಿ ಖಾತೆಗೆ ಹಣ ಜಮೆ

get 15 lakh loan through atm icici bank announces new scheme

ಮುಂಬೈ: ಖಾಸಗಿ ವಲಯದಲ್ಲಿ ಮುಂಚೂಣಿ ಬ್ಯಾಂಕ್‌'ಗಳ ಪೈಕಿ ಒಂದಾದ ಐಸಿಐಸಿಐ ಬ್ಯಾಂಕ್ ಎಟಿಎಂ ಮೂಲಕವೇ 15 ಲಕ್ಷ ರು.ವರೆಗೆ ವೈಯಕ್ತಿಕ ಸಾಲ ನೀಡುವ ಹೊಸ ಯೋಜನೆ ಜಾರಿಗೊಳಿಸಿದೆ. ಗ್ರಾಹಕರ ದತ್ತಾಂಶ ಒದಗಿಸುವ ಕಂಪನಿಗಳಿಂದ ಮಾಹಿತಿ ಪಡೆಯಲಿರುವ ಬ್ಯಾಂಕ್, ಆಯ್ದ ವೇತನ ವರ್ಗದ ಗ್ರಾಹಕರಿಗೆ ಈ ಸೌಲಭ್ಯ ನೀಡಲಿದೆ. ಈ ಯೋಜನೆ ಅನ್ವಯ, ಯಾವುದೇ ವ್ಯಕ್ತಿ, ಎಟಿಎಂನಲ್ಲಿ ಹಣಕಾಸು ವ್ಯವಹಾರ ಮುಗಿಸಿದಾಕ್ಷಣವೇ ಅವರು ಸಾಲಕ್ಕೆ ಅರ್ಹರಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅಂಥ ಗ್ರಾಹಕರು ತಮಗೆ ಸಾಲ ಬೇಕಾಗಿದ್ದಲ್ಲಿ, ಅಲ್ಲಿಯೇ ಅವರು ಕೆಲವು ಮಾಹಿತಿಗಳನ್ನು ದಾಖಲಿಸಿದರೆ ಸಾಕು. ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಈ ವೇಳೆ ಸಾಲ ಮರುಪಾವತಿ ಅವಧಿ, ಬಡ್ಡಿ ದರ, ಮಾಸಿಕ ಕಟ್ಟಬೇಕಾದ ಹಣ ಮೊದಲಾದ ಮಾಹಿತಿಗಳೂ ಕಂಪ್ಯೂಟರ್ ಪರದೆಯಲ್ಲೇ ಪ್ರಕಟವಾಗಲಿದೆ. ಈ ಹಿಂದೆ ಸಾಲ ಪಡೆಯದೇ ಇದ್ದ ಗ್ರಾಹಕರಿಗೂ ಈ ಸೌಲಭ್ಯ ಸಿಗಲಿದೆ.

epaperkannadaprabha.com

Follow Us:
Download App:
  • android
  • ios