ಕೇವಲ 20 ಮಂದಿ ವಾಸವಾಗಿರುವ ಜರ್ಮನಿಯಲ್ಲಿರುವ ಆಲ್ವಿನ್ ಎಂಬ ಗ್ರಾಮವು 1.06 ಕೋಟಿ ರು.ಗೆ ಮಾರಾಟವಾಗಿದೆ. ಇದು ಜರ್ಮನ್ ಇತಿಹಾಸದಲ್ಲೇ ಅತಿ ಕಡಿಮೆ ಬೆಲೆಗೆ ಮಾರಾಟವಾದ ಆಸ್ತಿ ಎಂಬ ದಾಖಲೆಗೆ ಪಾತ್ರವಾಗಿದೆ.

ಬರ್ಲಿನ್(ಡಿ.11): ಕೇವಲ 20 ಮಂದಿ ವಾಸವಾಗಿರುವ ಜರ್ಮನಿಯಲ್ಲಿರುವ ಆಲ್ವಿನ್ ಎಂಬ ಗ್ರಾಮವು 1.06 ಕೋಟಿ ರು.ಗೆ ಮಾರಾಟವಾಗಿದೆ. ಇದು ಜರ್ಮನ್ ಇತಿಹಾಸದಲ್ಲೇ ಅತಿ ಕಡಿಮೆ ಬೆಲೆಗೆ ಮಾರಾಟವಾದ ಆಸ್ತಿ ಎಂಬ ದಾಖಲೆಗೆ ಪಾತ್ರವಾಗಿದೆ.

ಅನಾಮಧೇಯ ವ್ಯಕ್ತಿಯೊಬ್ಬರು ಈ ಗ್ರಾಮವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಸಹೋದರರ ಒಡೆತನದಲ್ಲಿದ್ದ ಈ ಗ್ರಾಮವನ್ನು ನಿರ್ವಹಣೆ ಮಾಡಲಾಗದೆ ಹರಾಜಿಗೆ ಇಡಲಾಗಿತ್ತು. ದಕ್ಷಿಣ ಬರ್ಲಿನ್’ನಿಂದ 120 ಕಿ.ಮೀ ಇರುವ ಈ ಗ್ರಾಮಕ್ಕೆ ಇತ್ತೀಚೆಗಷ್ಟೇ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗೆ 1,25,000 ಯೂರೊ (ಸುಮಾರು 95 ಲಕ್ಷ ರು.)ಗೆ ದರ ನಿಗದಿ ಮಾಡಲಾಗಿತ್ತು.

ಇದರಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು 1.06 ಕೋಟಿ ರು.ಗೆ ಹರಾಜು ಕೂಗುವ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ. ಜರ್ಮನಿ ಏಕೀಕರಣದ ವೇಳೆ ಕಲ್ಲಿದ್ದಲು ಕಂಪನಿಯೊಂದಕ್ಕೆ ಸುಮಾರು 50 ಜನ ವಾಸವಿದ್ದ ಈ ಗ್ರಾಮ ಸೇರಿತ್ತು. ಗಣಿ ಮುಚ್ಚಿದ ಬಳಿಕ ಸಹೋದರರಿಬ್ಬರ ಪಾಲಾಯಿತು. ಈಗ ಇವರೂ ಇದನ್ನು ಹರಾಜಿಗೆ ಇಟ್ಟಿದ್ದರು.