1500 ಬಾಕ್ಸ್'ಳಲ್ಲಿ ತುಂಬಿದ್ದ ಬಿಯರ್ ಬಾಟಲಿಗಳು ಒಡೆದಿದ್ದರಿಂದ ರಸ್ತೆಯಲ್ಲಿ ಬಿಯರ್ ಹೊಳೆಯೇ ಹರಿದಿದೆ.

ಬಿಯರ್ ಪ್ರೇಮಿಗಳಿಗೆ ಈ ಸುದ್ದಿ ಕೇಳಿ ಆಘಾತವಾಗ ಬಹುದು. ಏಕೆಂದರೆ ಜರ್ಮನಿಯ ಉತ್ತರ ಫ್ರಾಂಕ್ಫರ್ಟ್ ಹೆದ್ದಾರಿಯೊಂದರಲ್ಲಿ ಟ್ರಕ್‌ವೊಂದು ಬುಧ'ವಾರ ಅಪಘಾತಕ್ಕೀಡಾಗಿ ಅದರಲ್ಲಿದ್ದ 30,೦೦೦ ಬಿಯರ್ ಬಾಟಲ್‌ಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದು, ಪ್ರಯೋಜನಕ್ಕೆ ಬರದಂತಾಗಿದೆ. 1500 ಬಾಕ್ಸ್'ಳಲ್ಲಿ ತುಂಬಿದ್ದ ಬಿಯರ್ ಬಾಟಲಿಗಳು ಒಡೆದಿದ್ದರಿಂದ ರಸ್ತೆಯಲ್ಲಿ ಬಿಯರ್ ಹೊಳೆಯೇ ಹರಿದಿದೆ. ಹೀಗಾಗಿ ಪೊಲೀಸರಿಗೆ ಸಂಚಾರವನ್ನು ಸ್ಥಗಿತಗೊಳಿಸಿ, ಸ್ವಚ್ಛತಾ ಕಾರ್ಯಾಚರಣೆಯನ್ನು ನಡೆಸಬೇಕಾಗಿ ಬಂತು.