ನವದೆಹಲಿ(ಜ.29):  ಅಪ್ರತಿಮ ದೇಶ ಭಕ್ತ , ಹೋರಾಟಗಾರ ಹಾಗೂ ಧೀಮಂತ ರಾಜಕರಣಿ ಜಾರ್ಜ್ ಫರ್ನಾಂಡಿಸ್(88) ಇಂದು ಬೆಳಗ್ಗೆ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮಾಜಿ ರಕ್ಷಣಾ ಸಚಿವರಾಗಿ, ರೈಲ್ವೇ ಸಚಿವರಾಗಿ ಸೇವೆ ಸಲ್ಲಿಸಿರುವ ಜಾರ್ಜ್ ಫರ್ನಾಂಡಿಸ್ ನಿಧನದಿಂದ ದೇಶದ ಹಿರಿಯ ಕೊಂಡಿಯೊಂದು ಕಳಚಿದೆ.

ಇದನ್ನೂ ಓದಿ: ಮಂಗಳೂರು, ಮುಂಬೈ, ದೆಹಲಿ: ಜಾರ್ಜ್ ಹೆಜ್ಜೆಯ ಜಾಡು ಹುಡುಕುತ್ತಾ!

ಜೂನ್ 3, 1930ರಲ್ಲಿ ಮಂಗಳೂರಿನಲ್ಲಿ ಜನಿಸಿದ ಜಾರ್ಜ್ ಫರ್ನಾಂಡಿಸ್, 1950ರಲ್ಲಿ ಬಾಂಬೇ ಕಾರ್ಮಿಕ ಚಳುವಳಿಯೊಂದಿಗೆ ರಾಜಕೀಯ ನಾಯಕರಾಗಿ ಬೆಳೆದರು.  ಹಿರಿಯ ರಾಜಕಾರಣಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

 

 

"

 

"

"