ಈವರೆಗೆ ಭಾರತದ ವಿದೇಶಾಂಗ ನೀತಿಗಳ ಬಗ್ಗೆ ಕಿಡಿಕಾರುತ್ತಿದ್ದ ಚೀನಾ ಮಾಧ್ಯಮ ಈಗ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿರುದ್ಧ ಕಿಡಿಕಾರಿವೆ. ಭಾರತವು ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ಯುದ್ಧ ಸನ್ನದ್ಧರಾಗಿರಬೇಕು ಎಂದು ಬಿಪಿನ್ ರಾವತ್ ನೀಡಿರುವ  ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ ಸರ್ಕಾರಿ ಸ್ವಾಮ್ಯತೆಯ ಗ್ಲೋಬಲ್ ಟೈಮ್ಸ್ ಪತ್ರಿಕೆಯು, ಬಿಪಿನ್ ರಾವತ್’ರ ಬಾಯಿ ಬಡುಕತನವು ಚೀನಾ ಹಾಗೂ ಭಾರತದ ಮಧ್ಯೆ ಉದ್ವಿಗ್ನತೆಯನ್ನು ಸೃಷ್ಟಿಸಬಹುದು ಎಂದು ಎಚ್ಚರಿಸಿದೆ.

ನವದೆಹಲಿ: ಈವರೆಗೆ ಭಾರತದ ವಿದೇಶಾಂಗ ನೀತಿಗಳ ಬಗ್ಗೆ ಟೀಕಿಸುತ್ತಿದ್ದ ಚೀನಾ ಮಾಧ್ಯಮ ಈಗ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿರುದ್ಧ ಕಿಡಿಕಾರಿವೆ.

ಭಾರತವು ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ಯುದ್ಧ ಸನ್ನದ್ಧರಾಗಿರಬೇಕು ಎಂದು ಬಿಪಿನ್ ರಾವತ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ ಸರ್ಕಾರಿ ಸ್ವಾಮ್ಯತೆಯ ಗ್ಲೋಬಲ್ ಟೈಮ್ಸ್ ಪತ್ರಿಕೆಯು, ಬಿಪಿನ್ ರಾವತ್’ರ ಬಾಯಿ ಬಡುಕತನವು ಚೀನಾ ಹಾಗೂ ಭಾರತದ ಮಧ್ಯೆ ಉದ್ವಿಗ್ನತೆಯನ್ನು ಸೃಷ್ಟಿಸಬಹುದು ಎಂದು ಎಚ್ಚರಿಸಿದೆ.

ಬಿಪಿನ್ ರಾವತ್’ರ ಸೊಕ್ಕು ಭಾರತದ ಪ್ರತಿಷ್ಠೆಗೆ ಧಕ್ಕೆ ತರಲಿದೆ ಎಂದು ಪತ್ರಿಕೆಯು ಸಂಪಾದಕೀಯದಲ್ಲಿ ಬರೆದುಕೊಂಡಿದೆ. ಈ ವಾರದಲ್ಲಿ ನಡೆದ ಬ್ರಿಕ್ಸ್ ಸಮ್ಮೆಳನದಲ್ಲಿ ಭಾರತ ಹಾಗೂ ಚೀನಾ ದ್ವಿಪಕ್ಷೀಯ ಮಾತುಕತೆ ಯಶಸ್ವಿಯಾಗಿ ನಡೆದಿದ್ದರೂ, ಸೇನಾ ಮುಖ್ಯಸ್ಥರ ಹೇಳಿಕೆ ತದ್ವಿರುದ್ಧವಾಗಿದೆ ಎಂದು ಅದು ಹೇಳಿದೆ.

ಡೋಕ್ಲಾಮ್ ಪ್ರದೇಶದಿಂದ ಸೇನೆಯನ್ನು ಚೀನಾ ವಾಪಸ್ ಕರೆಸಿಕೊಂಡು ಉಭಯ ದೇಶದ ನಡುವಿನ ಬಿಕ್ಕಟ್ಟು ಬಗೆಹರಿದಿದ್ದರೂ ಕೂಡಾ ಚೀನಾ ನಿಧಾನವಾಗಿ ಭಾರತದ ಪ್ರದೇಶಗಳನ್ನು ಕಬಳಿಸುತ್ತಿದೆ. ಭಾರತದ ಸಹನೆಯನ್ನು ಪರೀಕ್ಷಿಸುತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು.

ಚೀನಾ ತನ್ನ ಕದಂಬ ಬಾಹುಗಳನ್ನು ಭಾರತದತ್ತ ಚಾಚಲು ಶುರು ಮಾಡಿದೆ. ನೆರೆಯ ಪಾಕಿಸ್ತಾನ ಪರಿಸ್ಥಿತಿಯ ಲಾಭವನ್ನು ಪಡೆಯಲು ಹವಣಿಸುತ್ತಿದ್ದು, ಉತ್ತರ ಗಡಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಎದುರಾಳಿಗಳಾಗಿವೆ. ಇವೆರಡೂ ದೇಶಗಳ ಜೊತೆಗಿನ ಯುದ್ಧ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಎರಡು ಯುದ್ಧಗಳಿಗೆ ಭಾರತ ತಯಾರಾಗಿರುವ ಅಗತ್ಯವಿದೆ ಎಂದು ರಾವತ್ ಹೇಳಿದ್ದರು.