ಖಾಸಗಿ ಮೆಡಿಕಲ್ ಶಾಪ್’ಗಳಲ್ಲಿ ಲಭ್ಯವಾಗಲಿವೆ ಜೆನರಿಕ್ ಔಷಧಿ

First Published 15, Mar 2018, 9:17 AM IST
Genaric Medicin IN All medical Shop
Highlights

ಜನೌಷಧ ಕೇಂದ್ರ ಆರಂಭಿಸುವ ಮೂಲಕ ಜನರಿಗೆ ಅಗ್ಗದ ದರದಲ್ಲಿ ಔಷಧಗಳು ಸಿಗುವಂತೆ ಮಾಡಿರುವ ಕೇಂದ್ರ ಸರ್ಕಾರ, ಇದೀಗ ಎಲ್ಲಾ ಖಾಸಗಿ ಮೆಡಿಕಲ್ ಶಾಪ್‌ಗಳಲ್ಲೂ ಜೆನರಿಕ್ ಔಷಧಗಳನ್ನು ಜನರಿಗೆ ಕಾಣುವಂತೆ ಮಾಡಲು ಪ್ರತ್ಯೇಕ ಕಪಾಟಿನಲ್ಲಿ ಇಡುವಂತೆ ಸೂಚಿಸುವ ಬಗ್ಗೆ ಚಿಂತನೆ ನಡೆಸಿದೆ.

ನವದೆಹಲಿ: ಜನೌಷಧ ಕೇಂದ್ರ ಆರಂಭಿಸುವ ಮೂಲಕ ಜನರಿಗೆ ಅಗ್ಗದ ದರದಲ್ಲಿ ಔಷಧಗಳು ಸಿಗುವಂತೆ ಮಾಡಿರುವ ಕೇಂದ್ರ ಸರ್ಕಾರ, ಇದೀಗ ಎಲ್ಲಾ ಖಾಸಗಿ ಮೆಡಿಕಲ್ ಶಾಪ್‌ಗಳಲ್ಲೂ ಜೆನರಿಕ್ ಔಷಧಗಳನ್ನು ಜನರಿಗೆ ಕಾಣುವಂತೆ ಮಾಡಲು ಪ್ರತ್ಯೇಕ ಕಪಾಟಿನಲ್ಲಿ ಇಡುವಂತೆ ಸೂಚಿಸುವ ಬಗ್ಗೆ ಚಿಂತನೆ ನಡೆಸಿದೆ.

ಔಷಧಗಳು ಕಣ್ಣಿಗೆ ಸುಲಭವಾಗಿ ಕಾಣು ವಂತೆ ಇದ್ದರೆ, ಗ್ರಾಹಕರು ಅದನ್ನು ಖರೀದಿಸುವುದು ಸಾಧ್ಯವಾಗ ಲಿದೆ. ಹೀಗಾಗಿ ಜೆನರಿಕ್ ಔಷಧಿಗಳನ್ನು ಪ್ರತ್ಯೇಕ ಕಪಾಟಿನಲ್ಲಿ ಸರಿಯಾಗಿ ಕಾಣುವ ನಿಟ್ಟಿನಲ್ಲಿ ಅಳವಡಿಸುವುದಕ್ಕೆ ಔಷಧಗಳ ತಾಂತ್ರಿಕ ಸಲಹಾ ಮಂಡಳಿ ಸಭೆಯಲ್ಲಿ ಸಮ್ಮತಿಸಲಾಗಿದೆ.

loader