Asianet Suvarna News Asianet Suvarna News

ಗೌರಿ ನಡೆಸುತ್ತಿದ್ದ ಪತ್ರಿಕೆ ಹೊರತರಲು ಟ್ರಸ್ಟ್ ನೆರವು

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ನಂಬಿದ್ದ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶವುಳ್ಳ ‘ಗೌರಿ ಸ್ಮಾರಕ ಟ್ರಸ್ಟ್’ ರಚನೆಯಾಗಿದೆ. ಈ ಟ್ರಸ್ಟ್ ಡಿ. 4ರಂದು ನೋಂದಣಿಯಾಗುವ ಮೂಲಕ ಅಧಿಕೃತವಾಗಿ ತನ್ನ  ಕಾರ್ಯಾಚರಣೆಯನ್ನು ಆರಂಭಿಸಲಿದೆ.

Gauri Memorial Trust Comes Into Existence

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ನಂಬಿದ್ದ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶವುಳ್ಳ ‘ಗೌರಿ ಸ್ಮಾರಕ ಟ್ರಸ್ಟ್’ ರಚನೆಯಾಗಿದೆ. ಈ ಟ್ರಸ್ಟ್ ಡಿ. 4ರಂದು ನೋಂದಣಿಯಾಗುವ ಮೂಲಕ ಅಧಿಕೃತವಾಗಿ ತನ್ನ  ಕಾರ್ಯಾಚರಣೆಯನ್ನು ಆರಂಭಿಸಲಿದೆ.

ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರಿ ಸ್ಮಾರಕ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ವಿ.ಎಸ್. ಶ್ರೀಧರ್ ಅವರು ಗೌರಿ ನಂಬಿದ್ದ ಮೌಲ್ಯ ಎತ್ತಿ ಹಿಡಿಯುವ ಪತ್ರಿಕೆಯನ್ನು ಹೊರತರಲು ನೆರವಾಗುವುದು ಸೇರಿ 4 ಮುಖ್ಯ ಉದ್ದೇಶಗಳನ್ನು ಇಟ್ಟುಕೊಂಡು ಈ ಟ್ರಸ್ಟ್ ಆರಂಭಿಸಲಾಗುತ್ತಿದೆ.

 ಈ ಟ್ರಸ್ಟ್‌ಗೆ ಎಚ್.ಎಸ್.ದೊರೆಸ್ವಾಮಿ, ತೀಸ್ತಾ ಸೆಟಲ್‌ವಾಡ್ ಹಾಗೂ ಇತರರು ಮಾರ್ಗದರ್ಶಕರಾಗಿದ್ದಾರೆ. ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಸಲಾಮ್ ಪುತ್ತಿಗೆ, ಕೆ.ಎಲ್. ಅಶೋಕ್, ಎನ್.ಮುನಿಸ್ವಾಮಿ, ಹಾರ್ದಿಕ್ ದೇಸಾಯಿ, ಗಣೇಶ್ ದೇವಿ, ಡಾ.ರಹಮತ್ ತರೀಕೆರೆ, ಕೆ.ನೀಲಾ, ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವರು ಟ್ರಸ್ಟಿಗಳು ಎಂದು ಮಾಹಿತಿ ನೀಡಿದರು. ಗೌರಿ ಸ್ಮಾರಕ ಟ್ರಸ್ಟ್ ಸೋಮವಾರ

(ಡಿ. 4)ರಂದು ನೋಂದಣಿಯಾಗಲಿದೆ ಮತ್ತು ಟ್ರಸ್ಟ್‌ನ ಅಧಿಕೃತ ಘೋಷಣೆಯನ್ನು ಸೋಮವಾರ ಸಂಜೆ 5ಕ್ಕೆ ನಗರದ ಸೆನೆಟ್ ಹಾಲ್‌ನಲ್ಲಿ ‘ಸತ್ಯ ನುಡಿಯುವ ಅನಿವಾರ್ಯತೆ’ ವಿಚಾರಗೋಷ್ಠಿ ಹಾಗೂ ಉದ್ಘಾಟನಾ ಸಮಾರಂಭದ ಮೂಲಕ ಮಾಡಲಾಗುವುದು.

ತೀಸ್ತಾ ಸೆಟಲ್ವಾಡ್, ದೇವನೂರು ಮಹಾದೇವ, ಡಾ. ವಿಜಯಮ್ಮ, ಗಣೇಶ್ ಎನ್.ದೇವಿ, ಕೆ. ನೀಲಾ, ಪ್ರಕಾಶ್ ರೈ, ಸಿದ್ದಾರ್ಥ ವರದರಾಜನ್ ಭಾಗವಹಿಸುವರು.

ಟ್ರಸ್ಟ್‌ನ ಉದ್ದೇಶಗಳು

  1. ಗೌರಿ ನಂಬಿದ್ದ ಮೌಲ್ಯಗಳನ್ನು ಎತ್ತಿಹಿಡಿಯುವ ಪತ್ರಿಕೆಯನ್ನು ಹೊರತರಲು ನೆರವಾಗುವುದು ಹಾಗೂ ಪುಸ್ತಕಗಳ ಪ್ರಕಟಣೆ.
  2. ಗೌರಿ ಅವರ ಆದರ್ಶಗಳನ್ನು ಅನುಸರಿಸುತ್ತಿರುವ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪತ್ರಕರ್ತರು, ಕಾರ್ಯಕರ್ತರಿಗೆ ‘ಗೌರಿ ಲಂಕೇಶ್ ಪ್ರಶಸ್ತಿ’ ನೀಡುವುದು.
  3. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಗೌರಿ ಸ್ಮಾರಕ ವಾರ್ಷಿಕ ಉಪನ್ಯಾಸ ಏರ್ಪಡಿಸುವುದು
  4. ಗೌರಿ ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಬದ್ಧರಾದ ತಳ ಸಮುದಾಯದ ಪತ್ರಕರ್ತರಿಗೆ ಆಯ್ದ ವಿಷಯಗಳ ಕುರಿತು ಅಧ್ಯಯನ ನಡೆಸಲು ಸಂಶೋಧನಾ ವೇತನ ನೀಡುವುದು.

 

Follow Us:
Download App:
  • android
  • ios