ಗೌರಿ ಹತ್ಯೆಯ ಆರೋಪಿ ಪರಶುರಾಮ ವಾಗ್ಮೋರೆಯನ್ನು ಎಸ್ ಐಟಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು  ನಾನೇ ಗೌರಿ ಹತ್ಯೆ ಮಾಡಿದ್ದು ಎಂದು ಪರಶುರಾಮ ಒಪ್ಪಿಕೊಂಡಿದ್ದಾನೆ.  ಅಧಿಕೃತವಾಗಿ ಘೋಷಣೆ ಒಂದೇ ಬಾಕಿಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್’ಗೆ ತಿಳಿಸಿದ್ದಾರೆ.  

ವಿಜಯಪುರ (ಜೂ. 14):  ಗೌರಿ ಹತ್ಯೆಯ ಆರೋಪಿ ಪರಶುರಾಮ ವಾಗ್ಮೋರೆಯನ್ನು ಎಸ್ ಐಟಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು ನಾನೇ ಗೌರಿ ಹತ್ಯೆ ಮಾಡಿದ್ದು ಎಂದು ಪರಶುರಾಮ ಒಪ್ಪಿಕೊಂಡಿದ್ದಾನೆ. ಅಧಿಕೃತವಾಗಿ ಘೋಷಣೆ ಒಂದೇ ಬಾಕಿಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್’ಗೆ ತಿಳಿಸಿದ್ದಾರೆ. 

ಪರಶುರಾಮ್ ಟೈಗರ್ ಗ್ಯಾಂಗ್’ಗೆ ಸೇರಿದವನಲ್ಲ. ಟೈಗರ್ ಗ್ಯಾಂಗ್ ಗೋಕಾಕ್ ಮೂಲದ್ದು. ಬಾಗಲಕೋಟೆಯಲ್ಲೂ ಟೈಗರ್ ಗ್ಯಾಂಗ್’ನ ಸದಸ್ಯರು ಕೆಲಸ ಮಾಡುತ್ತಿದ್ದರು. ಸುಪಾರಿ ಕಿಲ್ಲರ್ ಆಗಿದ್ದ ಟೈಗರ್ ಗ್ಯಾಂಗಿಗೂ ಪರಶುರಾಮ ಗೂ ಸಂಬಂಧವಿಲ್ಲ ಎಂದು ಎಸ್ಐಟಿ ಯ ಹಿರಿಯ ಅಧಿಕಾರಿ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ. 

ಗೌರಿ ಹತ್ಯೆ ಮಾಡುವ ದಿನ ನಾವು ಮೂರು ಜನ ಇದ್ದೆವು. ನನ್ನ ಜೊತೆ ಇದ್ದ ಇಬ್ಬರು ಕನ್ನಡದವರು ಹಾಗೂ ಮತ್ತೋರ್ವ ಹಿಂದಿ ಭಾಷೆಯಲ್ಲಿ ಮಾತಾಡುತ್ತಿದ್ದ ಎಂದು ಪರಶುರಾಮ ಬಾಯ್ಬಿಟ್ಟಿದ್ದಾನೆ. 

ಗೌರಿ ಮೇಲೆ ಫೈಯರಿಂಗ್ ಮಾಡಿದ ಬಳಿಕ ಪಿಸ್ತೂಲನ್ನು ನನ್ನ ಜೊತೆ ಇದ್ದ ಮೂವರಿಗೆ ಒಪ್ಪಿಸಿ ಅಲ್ಲಿಂದ ಬಸ್ ನಲ್ಲಿ ವಿಜಯಪುರಕ್ಕೆ ಬಂದೆ ಎಂದು ಪರಶುರಾಮ್ ಒಪ್ಪಿಕೊಂಡಿದ್ದಾರೆ. ಪರಶುರಾಮ ಜೊತೆ ಇದ್ದ ಉಳಿದ ಮೂವರ ಬಗ್ಗೆ ಮಾಹಿತಿನೇ ಇಲ್ಲ. ಅವರ ಹೆಸರೂ ನನಗೆ ಗೊತ್ತಿಲ್ಲವೆಂದು ಎಸ್ ಐಟಿ ಎದುರು ಪರಶುರಾಮ್ ಒಪ್ಪಿಕೊಂಡಿದ್ದಾರೆ.