ಮಂಗಳವಾರ ರಾತ್ರಿ 8 ಗಂಟೆ 9 ನಿಮಿಷದಕ್ಕೆ ಈ ಘಟನೆ ಸಂಭವಿಸಿದೆ. 8 ಸೆಕೆಂಡ್'ಗಳಲ್ಲಿ 4 ಸುತ್ತು ಫೈರಿಂಗ್ ನಡೆದಿರುವುದು ಸಿಸಿಟಿವಿ ದೃಶ್ಯದಿಂದ ತಿಳಿದುಬರುತ್ತದೆ. ಆದರೆ, ಎಷ್ಟು ಮಂದಿ ಹಂತಕರಿದ್ದರು ಎಂಬುದು ಗೊತ್ತಾಗಿಲ್ಲ. ಒಬ್ಬ ವ್ಯಕ್ತಿ ದೃಶ್ಯ ಮಾತ್ರ ಸಿಸಿಟಿವಿಯಲ್ಲಿ ದಾಖಲಾಗಿದೆ. ಹಂತಕನಿಗೂ ಸಿಸಿಟಿವಿಗೂ 25 ಅಡಿಗಳಷ್ಟು ಅಂತರವಿರುವುದರಿಂದ ಆತನ ಮುಖ ಸ್ಪಷ್ಟವಾಗಿ ಕಾಣುವುದಿಲ್ಲ. ಆತ ತೊಟ್ಟಿದ್ದ ಜರ್ಕಿನ್'ನ ಬಣ್ಣ ಕೂಡ ಅಸ್ಪಷ್ಟವಾಗಿ ಕಾಣುತ್ತದೆ.

ಬೆಂಗಳೂರು(ಸೆ. 06): ಗೌರಿ ಲಂಕೇಶ್ ಮನೆಯಲ್ಲಿರುವ ಸಿಸಿಟಿವಿ ದೃಶ್ಯಗಳ ಎಕ್ಸ್'ಕ್ಲೂಸಿವ್ ವಿವರ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ. ಹತ್ಯೆ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಂಗಳವಾರ ರಾತ್ರಿ 8 ಗಂಟೆ 9 ನಿಮಿಷದಕ್ಕೆ ಈ ಘಟನೆ ಸಂಭವಿಸಿದೆ. 8 ಸೆಕೆಂಡ್'ಗಳಲ್ಲಿ 4 ಸುತ್ತು ಫೈರಿಂಗ್ ನಡೆದಿರುವುದು ಸಿಸಿಟಿವಿ ದೃಶ್ಯದಿಂದ ತಿಳಿದುಬರುತ್ತದೆ. ಆದರೆ, ಎಷ್ಟು ಮಂದಿ ಹಂತಕರಿದ್ದರು ಎಂಬುದು ಗೊತ್ತಾಗಿಲ್ಲ. ಒಬ್ಬ ವ್ಯಕ್ತಿ ದೃಶ್ಯ ಮಾತ್ರ ಸಿಸಿಟಿವಿಯಲ್ಲಿ ದಾಖಲಾಗಿದೆ. ಹಂತಕನಿಗೂ ಸಿಸಿಟಿವಿಗೂ 25 ಅಡಿಗಳಷ್ಟು ಅಂತರವಿರುವುದರಿಂದ ಆತನ ಮುಖ ಸ್ಪಷ್ಟವಾಗಿ ಕಾಣುವುದಿಲ್ಲ. ಆತ ತೊಟ್ಟಿದ್ದ ಜರ್ಕಿನ್'ನ ಬಣ್ಣ ಕೂಡ ಅಸ್ಪಷ್ಟವಾಗಿ ಕಾಣುತ್ತದೆ.

ಮೊದಲು ಹಿಡಿಯಲು ಹೋಗುವ ಹಂತಕ:
ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯದ ಪ್ರಕಾರ, ಗೌರಿ ಲಂಕೇಶ್ ಅವರು ತಮ್ಮ ಮನೆಯ ಗೇಟ್ ಎದುರು ಕಾರು ನಿಲ್ಲಿಸುತ್ತಾರೆ. ಬಳಿಕ ಕಾರ್ ಬಾಗಿಲು ತೆರೆದು ಹೊರಬಂದು ಮನೆಯ ಚಿಕ್ಕ ಗೇಟ್ ತೆರೆಯುತ್ತಾರೆ. ಆನಂತರ ದೊಡ್ಡ ಗೇಟ್ ತೆರೆಯಲು ಮುಂದಾಗುತ್ತಾರೆ. ಆಗ ಹಂತಕ ಅಲ್ಲಿಗೆ ಆಗಮಿಸುತ್ತಾನೆ. ಮೊದಲು ಆತ ಗೌರಿ ಲಂಕೇಶ್ ಅವರನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾನೆ. ಇದಕ್ಕೆ ಗೌರಿ ಪ್ರತಿರೋಧ ತೋರಿದಾಗ ಹಂತಕ ಫೈರಿಂಗ್ ಮಾಡುತ್ತಾನೆ. ಸಿಸಿಟಿವಿಯ ದೃಶ್ಯದ ಪ್ರಕಾರ ಹಂತಕನ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬಹುದೆಂದು ಅಂದಾಜಿಸಲಾಗಿದೆ.