ಪಟನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಸದಾ ಕಿಡಿಕಾರುವ ಮತ್ತು ಬಿಜೆಪಿ ಸಭೆಗಿಂತ ವಿಪಕ್ಷಗಳ ಕಾರ್ಯಕ್ರಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ತನ್ನ ಸಂಸದ ಶತ್ರುಘ್ನ ಸಿನ್ಹಾಗೆ ಕೊನೆಗೂ ಬಿಜೆಪಿ ಕೊಕ್‌ ನೀಡುವ ಸಾಧ್ಯತೆ.

ಲೋಕಸಭೆಯಲ್ಲಿ ಬಿಹಾರದ ಪಾಟ್ನಾ ಸಾಹೀಬ್‌ ಕ್ಷೇತ್ರವನ್ನು ಇದುವರೆಗೆ ಸಿನ್ಹಾ ಪ್ರತಿನಿಧಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರವನ್ನು , ಬಿಹಾರದ ಉಪಮುಖ್ಯಮಂತ್ರಿ ಸುಶೀಲ್‌ ಮೋದಿಗೆ ಬಿಟ್ಟುಕೊಡಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. 

ಸಿನ್ಹಾ ಪಕ್ಷದ ವಿರುದ್ಧ ಹಲವು ಟೀಕೆ ಮಾಡಿದರೂ, ಅವರ ಬಗ್ಗೆ ಪಕ್ಷ ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ.