ಕುಡಿದ ಮತ್ತಿನಲ್ಲಿ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಬಳಿ ಎದುರಾಳಿ ಗುಂಪಿನ ಸದಸ್ಯ ಸೇರಿದಂತೆ ಸಾರ್ವಜನಿಕರ ಮೇಲೆ ಲಾಂಗ್‌ ಬೀಸಿ ಪುಂಡಾಟಿಕೆ ಎಸಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಅರೆಸ್ಟ್ ಮಾಡಲಾಗಿದೆ. 

ಬೆಂಗಳೂರು :  ಕುಡಿದ ಮತ್ತಿನಲ್ಲಿ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಬಳಿ ತನ್ನ ಎದುರಾಳಿ ಗುಂಪಿನ ಸದಸ್ಯ ಸೇರಿದಂತೆ ಸಾರ್ವಜನಿಕರ ಮೇಲೆ ಲಾಂಗ್‌ ಬೀಸಿ ಪುಂಡಾಟಿಕೆ ಎಸಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.

ರಘುವನಹಳ್ಳಿ ನಿವಾಸಿ ಹರ್ಷಿತ್‌ಗೌಡ ಅಲಿಯಾಸ್‌ ಹಚ್ಚು ಹಾಗೂ ವಡೇರಹಳ್ಳಿ ಶರಣ್‌ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಲಾಂಗ್‌ ಜಪ್ತಿ ಮಾಡಲಾಗಿದೆ. ಹಲ್ಲೆಗೊಳಗಾಗಿದ್ದ ಮಿಥುನ್‌ ಹಾಗೂ ಸರಕು ಸಾಗಾಣಿಕೆ ವಾಹನ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಕಂಠಮಟ್ಟದವರೆಗೆ ಮದ್ಯ ಸೇವಿಸಿ ಬುಧವಾರ ಸಂಜೆ 6.30ರ ಸುಮಾರಿಗೆ ಸ್ಕೂಟರ್‌ನಲ್ಲಿ ಹರ್ಷಿತ್‌ ಹಾಗೂ ಶರಣ್‌, ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಬಳಿ ಬಂದಿದ್ದರು. ಆ ವೇಳೆ ಅವರಿಗೆ ತಮ್ಮ ವಿರೋಧಿ ಗುಂಪಿನ ಮಿಥುನ್‌ ಎದುರಾಗಿದ್ದಾನೆ. ಆಗ ಆತನ ಮೇಲೆ ಏಕಾಏಕಿ ಲಾಂಗ್‌ನಿಂದ ಹಲ್ಲೆ ನಡೆಸಿ, ಹರ್ಷಿತ್‌ ಗೂಂಡಾಗಿರಿ ಮಾಡಿದ್ದಾನೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಶ್ರೀಕಾಂತ್‌ ಎಂಬಾತನ ಮೇಲೂ ಆರೋಪಿಗಳು ಲಾಂಗ್‌ ಬೀಸಿದ್ದಾರೆ.

ಇದೇ ವೇಳೆ ಪ್ರೊಬೇಷನರಿ ಪಿಎಸ್‌ಐವೊಬ್ಬರು ಆ ರಸ್ತೆಯಲ್ಲಿ ಬರುವುದನ್ನು ಕಂಡು ಕಾಲ್ಕಿತ್ತಿದ್ದ ಆರೋಪಿಗಳು, ಕೋಣನಕುಂಟೆ ರಸ್ತೆಯಲ್ಲಿ ಎದುರಿನಿಂದ ಬಂದ ಗೂಡ್ಸ್‌ ವಾಹನ ಚಾಲಕನಿಗೂ ಹೊಡೆದು ಪರಾರಿಯಾಗಿದ್ದರು. ಕೊನೆಗೆ ಹಲ್ಲೆ ವಿಡಿಯೋ ಆಧರಿಸಿ ಕಾರ್ಯಾಚರಣೆಗಿಳಿದ ಎಸಿಪಿ ಮಹದೇವ್‌ ನೇತೃತ್ವ ತಂಡವು, ವಡೇರಹಳ್ಳಿಯ ತೋಟದ ಮನೆಯಲ್ಲಿ ಅವಿತುಕೊಂಡಿದ್ದ ಆರೋಪಿಗಳನ್ನು ಬಂಧಿಸಿದೆ.ರಿಪಡಿಸಲು ಒಪ್ಪಿಸಲಾಗಿದೆ. ಅದಕ್ಕಾಗಿ ಸ್ಪಲ್ಪ ಹಣವನ್ನು ನೀಡಲಾಗಿದೆ. ಹಾಗಾಗಿ ಶೀಘ್ರದಲ್ಲೇ ಇಟಿಎಂ ಸಮಸ್ಯೆ ಪರಿಹಾರವಾಗಲಿದೆ. ಅಲ್ಲದೆ, ಟ್ರೈಮ್ಯಾಕ್ಸ್ ಕಂಪನಿಯೊಂದಿಗಿನ ಒಪ್ಪಂದ ರದ್ದುಪಡಿಸಲು ನಿರ್ಧರಿಸಿದ್ದು, ಶೀಘ್ರದಲ್ಲೇ ಐಟಿಎಸ್ ನಿರ್ವಹಣೆಗೆ ಟೆಂಡರ್ ಆಹ್ವಾನಿಸುವುದಾಗಿ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ನಿಗಮಕ್ಕೆ ನಷ್ಟವಿಲ್ಲ: ಟ್ರೈಮ್ಯಾಕ್ಸ್ ಕಂಪನಿ ದಿವಾಳಿ ಯಾಗಿರುವುದರಿಂದ ನಿಗಮಕ್ಕೆ ಯಾವುದೇ ನಷ್ಟವಿಲ್ಲ. ಇಟಿಎಂ ಮಿಷನ್ ಸೇರಿದಂತೆ ಐಟಿಎಸ್ ಸೇವೆಗೆ ಅಗ ತ್ಯವಿದ್ದ ಉಪಕರಣಗಳನ್ನು ಆ ಕಂಪನಿಯೇ ಪೂರೈಕೆ ಮಾಡಿತ್ತು. ಹಾಗಾಗಿ ಪ್ರತಿ ತಿಂಗಳು ಕಂಪನಿಗೆ ಸುಮಾರು 1 ಕೋಟಿ ರು. ಪಾವತಿಸಲಾಗುತ್ತಿತ್ತು. ಆರು ತಿಂಗಳ ಹಿಂದೆಯೇ ಕೆಲ ಸಂಸ್ಥೆಗಳು ಈ ಕಂಪನಿಯ ಬಗ್ಗೆ ಎಚ್ಚರಿಕೆ ನೀಡಿದ್ದರಿಂದ ಕಳೆದ 4-5 ತಿಂಗಳಿಂದ ಹಣ ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ ನಿಗಮಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಹೇಳಿದರು.