Asianet Suvarna News Asianet Suvarna News

ಅಪಾಯದಲ್ಲಿ ಗಂಗೆ: ಕಾಲ್ನಡಿಗೆಯಲ್ಲೇ ನದಿಯನ್ನು ದಾಟಬಹುದಾದ ಪರಿಸ್ಥಿತಿ!

ಗಂಗಾದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. ಇದು ಅಪಾಯದ ಚಿಹ್ನೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ. ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣದಿಂದ ಜನರು ದೋಣಿಗಳನ್ನು ಕೂಡಾ ಮೇಲೆತ್ತುತ್ತಿದ್ದಾರೆ ಎಂದು ಹೇಳಲಾಗಿದೆ. ಬಾಕಿ ಉಳಿದಿರುವ ನೀರು ಮಲಿನವಾಗಿದ್ದು ಕುಡಿಯಲಾಗಲಿ ಅಥವಾ ಸ್ನಾನಕ್ಕಾಗಲಿ ಬಳಸಲೂ ಯೋಗ್ಯವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

Ganga in dangeras water level in Allahabad decreases alarmingly

ಅಲಹಾಬಾದ್ (ಮೇ.21): ಉತ್ತರ ಪ್ರದೇಶದಲ್ಲಿ ಒಂದು ಕಡೆ ಭಯಂಕರ ಬಿಸಿಲಿನಿಂದ ಜನರು ಹೈರಾಣಾಗಿದ್ದರೆ, ಇನ್ನೊಂದು ಕಡೆ ಅಲಹಾಬಾದಿನ ಫಫಮೌ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ನೀರಿನ ಮಟ್ಟ ಪಾತಾಳಕ್ಕಿಳಿದಿದೆ. ಗಂಗಾ ನದಿಯನ್ನು ಇಲ್ಲಿ ಕಾಲ್ನಡಿಗೆಯಲ್ಲಿ ದಾಟಬಹುದಾದ ಪರಿಸ್ಥಿತಿ ಉಂಟಾಗಿದೆಯೆಂದು ಹೇಳಲಾಗಿದೆ.

ಗಂಗಾದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. ಇದು ಅಪಾಯದ ಚಿಹ್ನೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ. ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣದಿಂದ ಜನರು ದೋಣಿಗಳನ್ನು ಕೂಡಾ ಮೇಲೆತ್ತುತ್ತಿದ್ದಾರೆ ಎಂದು ಹೇಳಲಾಗಿದೆ. ಬಾಕಿ ಉಳಿದಿರುವ ನೀರು ಮಲಿನವಾಗಿದ್ದು ಕುಡಿಯಲಾಗಲಿ ಅಥವಾ ಸ್ನಾನಕ್ಕಾಗಲಿ ಬಳಸಲೂ ಯೋಗ್ಯವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಗಂಗಾ ಹೆಸರಿನಲ್ಲಿ ಸಾಕಾಷ್ಟು ಅನುದಾನವನ್ನು ನೀಡಲಾಗುತ್ತಿದ್ದರೂ, ನದಿಯಲ್ಲಿ ನೀರನ್ನುಳಿಸಲು ಸರ್ಕಾರ ವಿಫಲವಾಗಿದೆಯೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ವರದಿ/ಚಿತ್ರ: ಏಎನ್ಐ)

Follow Us:
Download App:
  • android
  • ios