ಆ ಜಿಲ್ಲೆಯಲ್ಲೊಂದು ಗ್ಯಾಂಗ್ ಇದೆ. ಆ ಗ್ಯಾಂಗ್ ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತದೆ. ಮೊದಲು ಲವ್ ಮಾಡಿ ಬಣ್ಣ ಬಣ್ಣದ ಕನಸು ತೋರಿಸಿ ನಂತರ ಅಪ್ರಾಪ್ತೆಯರನ್ನು ಮಾರಾಟ ಮಾಡುತ್ತದೆ . ಅಪ್ರಾಪ್ತ ಬಾಲಕಿಯರೇನಾದರೂ ಆ ಗ್ಯಾಂಗ್ ಕೈಗೆ ಸಿಕ್ಕಿ ಹಾಕಿಕೊಂಡರೆ ಮರಳಿ ಮನೆಗೆ ಬರುವ ಗ್ಯಾರಂಟಿನೇ ಇರುವುದಿಲ್ಲ. ಇಂತಹದ್ದೊಂದು ಖತರ್ನಾಕ್ ಗ್ಯಾಂಗ್ ನ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಬೀದರ್(ಆ.07): ಆ ಜಿಲ್ಲೆಯಲ್ಲೊಂದು ಗ್ಯಾಂಗ್ ಇದೆ. ಆ ಗ್ಯಾಂಗ್ ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತದೆ. ಮೊದಲು ಲವ್ ಮಾಡಿ ಬಣ್ಣ ಬಣ್ಣದ ಕನಸು ತೋರಿಸಿ ನಂತರ ಅಪ್ರಾಪ್ತೆಯರನ್ನು ಮಾರಾಟ ಮಾಡುತ್ತದೆ . ಅಪ್ರಾಪ್ತ ಬಾಲಕಿಯರೇನಾದರೂ ಆ ಗ್ಯಾಂಗ್ ಕೈಗೆ ಸಿಕ್ಕಿ ಹಾಕಿಕೊಂಡರೆ ಮರಳಿ ಮನೆಗೆ ಬರುವ ಗ್ಯಾರಂಟಿನೇ ಇರುವುದಿಲ್ಲ. ಇಂತಹದ್ದೊಂದು ಖತರ್ನಾಕ್ ಗ್ಯಾಂಗ್ ನ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಬಡ ಮತ್ತು ಕೂಲಿ ಕಾರ್ಮಿಕರ ಅಪ್ರಾಪ್ತ ಯುವತಿಯರನ್ನ ಮೊದಲು ಪ್ರೀತಿಸುವ ನಾಟಕ ಆಡುವುದು. ಆಮೇಲೆ ಅದೇ ಯುವತಿಯರನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವುದು. ಅಮಾಯಕರನ್ನು ವಂಚಿಸುವ ಇಂತಹದ್ದೊಂದು ಖತರ್ನಾಕ್ ಗ್ಯಾಂಗ್ ಇರುವುದು ಗಡಿ ಜಿಲ್ಲೆ ಬೀದರ್'ನಲ್ಲಿ .
ಗಡಿ ಜಿಲ್ಲೆ ಬೀದರ್ ನ ರಾಜಕುಮಾರ್-ಭಾಗ್ಯವತಿ ದಂಪತಿಯ ಮಗಳಾದ ನಾಗಮಣಿ ಎಂಬ ಅಪ್ರಾಪ್ತ ಯುವತಿಯನ್ನು ಬದ್ರೋದ್ದೀನ್ ಕಾಲೋನಿಯ ಅನಿಲ್ ಎಂಬ ಯುವಕ ಪ್ರೀತಿಸುವ ನಾಟಕವಾಡಿ ಓಡಿಸಿಕೊಂಡು ಹೋಗಿದ್ದಾನೆ. ಇದರಲ್ಲಿ ಅನಿಲ್ ತಾಯಿ ಆಶಾ ಕೈವಾಡವೂ ಇದ್ದು ಆಕೆಯೂ ಪರಾರಿಯಾಗಿದ್ದಾಳೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಲಾನ ಎಂಬ ಮತ್ತೊಬ್ಬ ಮಹಿಳೆ ಇದೀಗ ಪೋಲೀಸರ ವಶದಲ್ಲಿದ್ದಾಳೆ. ಈ ಗ್ಯಾಂಗ್ ತಮ್ಮ ಮಗಳನ್ನ ರಾಜಸ್ಥಾನದಲ್ಲಿ ಮಾರಾಟ ಮಾಡಿದ್ದಾರೆ ಎಂಬುದು ನಾಗಮಣಿ ಪೋಷಕರ ಆರೋಪ.
ಈ ಪ್ರಕರಣದ ಬಗ್ಗೆ ಪೋಲೀಸ್ರು ಮಾತ್ರ ಇದೊಂದು ಕಿಡ್ನಾಪ್, ಮಾರಾಟ ಪ್ರಕರಣ ಅಲ್ಲ ಎನ್ನುತ್ತಿದ್ದಾರೆ. ಆದ್ರೆ ಸ್ಥಳೀಯರು ಹಾಗೂ ಅಪ್ರಾಪ್ತ ಬಾಲಕಿಯ ಸಂಬಂಧಿಕರು ಮಾತ್ರ ಇಂತಹ ಪ್ರಕರಣಗಳು ಈ ಗ್ಯಾಂಗ್'ನಿಂದ ಹಿಂದೆ ಕೂಡ ನಡೆದಿದ್ದು, ಬಡಾವಣೆಯಲ್ಲಿ ಹೊಸ ಹೊಸ ಯುವತಿಯರನ್ನು ಕರೆದುಕೊಂಡು ಬಂದು, ಕೆಲ ದಿನ ಅವರ ಜತೆಯಲ್ಲೇ ಇಟ್ಟುಕೊಂಡು ಬಳಿಕ ಅವರನ್ನ ಗುಜರಾತ್ ಹಾಗೂ ರಾಜಸ್ತಾನಗಳಿಗೆ ರವಾನಿಸಲಾಗುತ್ತಿತ್ತು ಎನ್ನುತ್ತಿದ್ದಾರೆ.
ಈ ಹಿಂದೆಯೂ ಇಂತಹ ಆರೋಪ ಕೇಳಿ ಬಂದಿದ್ದರೂ ಪೋಲೀಸರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ಇನ್ನಾದರೂ ಪೋಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಬೇಕಿದೆ.
