ಸಂಸದ ರವೀಂದ್ರ ಗಾಯಕ್ ವಾಡ್ ಗೆ ಇಂಡಿಯನ್ ಏರ್ ಲೈನ್ಸ್ ನಿಷೇಧ ಹೇರಿರುವ ಬಗ್ಗೆ ಪ್ರತಿಭಟನೆ ಮಾಡುವುದಾಗಿ ಶಿವಸೇನೆ ಒಂದೆಡೆ ಹೇಳಿದ್ದರೆ ಇನ್ನೊಂದೆಡೆ ಲೋಕಸಭಾ ಸ್ಪೀಕರ್ ಇಂತಹ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನನಗೆ ಅಧಿಕಾರವಿಲ್ಲ ಎಂದು ನಾಗರೀಕ ವಿಮಾನಯಾನ ಸಚಿವಾಲಯದ ನ್ಯಾಯಾಲಯದ ಅಂಗಳಕ್ಕೆ ಈ ಚೆಂಡನ್ನು ಎಸೆದಿದ್ದಾರೆ.
ನವದೆಹಲಿ (ಏ.05): ಸಂಸದ ರವೀಂದ್ರ ಗಾಯಕ್ ವಾಡ್ ಗೆ ಇಂಡಿಯನ್ ಏರ್ ಲೈನ್ಸ್ ನಿಷೇಧ ಹೇರಿರುವ ಬಗ್ಗೆ ಪ್ರತಿಭಟನೆ ಮಾಡುವುದಾಗಿ ಶಿವಸೇನೆ ಒಂದೆಡೆ ಹೇಳಿದ್ದರೆ ಇನ್ನೊಂದೆಡೆ ಲೋಕಸಭಾ ಸ್ಪೀಕರ್ ಇಂತಹ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನನಗೆ ಅಧಿಕಾರವಿಲ್ಲ ಎಂದು ನಾಗರೀಕ ವಿಮಾನಯಾನ ಸಚಿವಾಲಯದ ನ್ಯಾಯಾಲಯದ ಅಂಗಳಕ್ಕೆ ಈ ಚೆಂಡನ್ನು ಎಸೆದಿದ್ದಾರೆ.
ಗಾಯಕ್ ವಾಡ್ ಪತ್ರವನ್ನು ನಾಗರೀಕ ವಿಮಾನಯಾನ ಸಚಿವರಾದ ಅಶೋಕ್ ಗಜಪತಿ ರಾಜುರವರಿಗೆ ಕೊಡುವಂತೆ ನನ್ನ ಸೆಕ್ರೆಟರಿಗೆ ಹೇಳಿದ್ದೇನೆ. ಅವರ ಮೇಲಿರುವ ನಿಷೇಧವನ್ನು ತೆಗೆದು ಹಾಕುವಂತೆ ಕೋರಲಾಗಿರುವ ಮನವಿಯನ್ನು ಪರಿಗಣಿಸಬೇಕೆಂದು ಕೇಳಿಕೊಳ್ಳಲಾಗಿದೆ. ನಿಷೇಧವನ್ನು ತೆಗೆದು ಹಾಕುವುದು ಅವರ ಕೈಯಲ್ಲಿದೆ ಎಂದು ಸುಮಿತ್ರಾ ಮಹಜನ್ ಹೇಳಿದ್ದಾರೆ.
