ಬರಲಿದೆ ಮೂತ್ರ ಬ್ಯಾಂಕ್:ಮೂತ್ರ ಕೊಟ್ರೆ ಹಣ ಸಿಗುತ್ತೆಐಡಿಯಾ ಯೂರಿಯಾ ಉತ್ಪಾದನೆಗೆ ಗಡ್ಕರಿ ಪ್ಲ್ಯಾನ್
ನವದೆಹಲಿ: ಹಣಕಾಸು ಬ್ಯಾಂಕ್, ಬ್ಲಡ್ ಬ್ಯಾಂಕ್, ಎದೆ ಹಾಲಿನ ಬ್ಯಾಂಕ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅತ್ಯಂತ ವಿಶಿಷ್ಟವಾದ ಬ್ಯಾಂಕ್‌ವೊಂದನ್ನು ತೆರೆಯುವ ಕನಸು ಕಂಡಿದ್ದಾರೆ. ಅದು- ಮಾನವರ ಮೂತ್ರ ಬ್ಯಾಂಕ್!
ಹೌದು, ಮಾನವರ ಮೂತ್ರವೇ. ರಸಗೊಬ್ಬರಕ್ಕಾಗಿ ಯೂರಿಯಾ ಬೇಕು. ಅದನ್ನು ಹಣ ತೆತ್ತು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆ ಅವಲಂಬನೆ ತಪ್ಪಿಸುವ ಸಲುವಾಗಿ ದೇಶಾದ್ಯಂತ ತಾಲೂಕು ಕೇಂದ್ರಗಳಲ್ಲಿ ಮೂತ್ರ ಬ್ಯಾಂಕ್ ತೆರೆಯುವ ಕನಸನ್ನು ಗಡ್ಕರಿ ಬಿಚ್ಚಿಟ್ಟಿದ್ದಾರೆ.
ರೈತರು 10 ಲೀಟರ್ ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ತಮ್ಮ ಮೂತ್ರ ಸಂಗ್ರಹಿಸಿ ತಂದು ಈ ಬ್ಯಾಂಕುಗಳಲ್ಲಿ ಕೊಟ್ಟರೆ, ಲೀಟರ್‌ಗೆ 1 ರು.ನಂತೆ ೧೦ ರು. ಸಿಗುವ ವ್ಯವಸ್ಥೆ ಇದಾಗಿರುತ್ತದೆ. ಈ ಬಗ್ಗೆ ನಾಗಪುರದಲ್ಲಿ ಧಾಪೇವಾಡ ಗ್ರಾಮದಲ್ಲಿ ಪ್ರಯೋಗ ನಡೆಸಲಾಗುತ್ತದೆ.
ಮಾನವರ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್ ಇದೆ. ಆದರೆ ಅದು ವ್ಯರ್ಥವಾಗುತ್ತಿದೆ. ತ್ಯಾಜ್ಯವನ್ನು ಸಂಪತ್ತನ್ನಾಗಿ ಪರಿವರ್ತಿಸುವುದು ನನ್ನ ಅಭಿಲಾಷೆ. ಎಂದು ಸಚಿವರು ತಿಳಿಸಿದ್ದಾರೆ.
