’ಗಬ್ಬರ್ ಸಿಂಗ್ ಟ್ಯಾಕ್ಸ್ ’ ಪದವನ್ನು ರಾಹುಲ್ ಗಾಂಧಿಗೆ ಹೇಳಿಕೊಟ್ಟಿದ್ದೇ ಇವರಂತೆ!

First Published 23, Mar 2018, 12:55 PM IST
Gabbar Singh Tax Word thought by Analitica
Highlights

ಫೇಸ್‌ಬುಕ್ ದತ್ತಾಂಶ  ಸೋರಿಕೆ ವಿವಾದದಲ್ಲಿ ಕಾಂಗ್ರೆಸ್  ಹೆಸರನ್ನು ಬಿಜೆಪಿ  ಎಳೆದು ತಂದಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ  ಅಧ್ಯಕ್ಷ ರಾಹುಲ್ ಗಾಂಧಿ, ‘ಇರಾಕಲ್ಲಿ  39 ಭಾರತೀಯರು ಮೃತಪಟ್ಟ ಪ್ರಕರಣದಲ್ಲಿ ಅವರ ಕುಟುಂಬಗಳಿಗೆ ಸುಳ್ಳು ಹೇಳಿ ಕೇಂದ್ರ ಸಿಕ್ಕಿಬಿದ್ದಿದೆ. ಈಗ ಅದನ್ನು  ಮುಚ್ಚಿಹಾಕಲು ಕಾಂಗ್ರೆಸ್, ಫೇಸ್ಬುಕ್‌ನ  ಮಾಹಿತಿ ಕಳವಿನ ಕತೆ ಕಟ್ಟಿದೆ’ ಎಂದು  ಪ್ರತ್ಯಾರೋಪ ಮಾಡಿದ್ದಾರೆ.

ಬೆಂಗಳೂರು (ಮಾ. 23): ಫೇಸ್‌ಬುಕ್ ದತ್ತಾಂಶ  ಸೋರಿಕೆ ವಿವಾದದಲ್ಲಿ ಕಾಂಗ್ರೆಸ್  ಹೆಸರನ್ನು ಬಿಜೆಪಿ  ಎಳೆದು ತಂದಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ  ಅಧ್ಯಕ್ಷ ರಾಹುಲ್ ಗಾಂಧಿ, ‘ಇರಾಕಲ್ಲಿ  39 ಭಾರತೀಯರು ಮೃತಪಟ್ಟ ಪ್ರಕರಣದಲ್ಲಿ ಅವರ ಕುಟುಂಬಗಳಿಗೆ ಸುಳ್ಳು ಹೇಳಿ ಕೇಂದ್ರ ಸಿಕ್ಕಿಬಿದ್ದಿದೆ. ಈಗ ಅದನ್ನು  ಮುಚ್ಚಿಹಾಕಲು ಕಾಂಗ್ರೆಸ್, ಫೇಸ್ಬುಕ್‌ನ  ಮಾಹಿತಿ ಕಳವಿನ ಕತೆ ಕಟ್ಟಿದೆ’ ಎಂದು  ಪ್ರತ್ಯಾರೋಪ ಮಾಡಿದ್ದಾರೆ. 

ಜಿಎಸ್‌ಟಿ ಕುರಿತಾದ ‘ಗಬ್ಬರ್ ಸಿಂಗ್ ಟ್ಯಾಕ್ಸ್’, ‘ವಿಕಾಸ್ ಗಾನ್ ಕ್ರೇಜಿ’ ಮುಂತಾದ ‘ವೈರಲ್’ ನುಡಿಗಟ್ಟುಗಳನ್ನು  ರಾಹುಲ್‌ಗೆ ಹೆಣೆದುಕೊಟ್ಟಿದ್ದೇ ಈ ಕಂಪನಿ ಎಂದೂ ಅವರು ಹೇಳಿದ್ದಾರೆ. ರಾಹುಲ್ ಗಾಂಧಿಯ ಸಂಪೂರ್ಣ ಸಾಮಾಜಿಕ ಜಾಲತಾಣ ಪ್ರಚಾರ ಕಾರ್ಯವನ್ನು ಕೇಂಬ್ರಿಜ್ ಅನಾಲಿಟಿಕಾ ಕಂಪನಿಯ ನೆರವಿನಿಂದಲೇ ನಿರ್ವಹಿಸಲಾಗುತ್ತಿದೆ. ಇವರು ಸಭೆಗಳನ್ನು ಕೂಡ ನಡೆಸಿದ್ದಾರೆ. ಈ ಕಂಪನಿ ತೀಕ್ಷ್ಣವಾದ, ಕೆಳಮಟ್ಟದ  ಹಾಗೂ ಸುಳ್ಳು ಸುದ್ದಿಗಳ ಪ್ರಚಾರಕ್ಕೆ ಹೆಸರುವಾಸಿ. ಗಬ್ಬರ ಸಿಂಗ್ ಟ್ಯಾಕ್ಸ್ ಎಂಬ ಹೇಳಿಕೆಯನ್ನು ಹೇಳಿಕೊಟ್ಟಿದ್ದು ಕೂಡ ಇದೇ ಕಂಪನಿ. ಆದರೆ ಈ ಮಾಹಿತಿ ಬಹಿರಂಗ ಮಾಡದೇ ೫ ತಿಂಗಳಿಂದ ರಾಹುಲ್ ಏಕೆ ಸುಮ್ಮನೇ ಕೂತಿದ್ದಾರೆ ಎಂದು ರವಿಶಂಕರ ಪ್ರಸಾದ್  ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

loader