ಒಸಾಕ (ಜೂ.30): ಭಯೋತ್ಪಾದಕ ಕೃತ್ಯಗಳಿಗೆ ಹಣ ಹೊಂದಿಸಲು ಉಗ್ರಗಾಮಿಗಳು ಇಂಟರ್ನೆಟ್‌ ಬಳಸುವ ಪರಿಪಾಠಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಜಿ-20 ದೇಶಗಳ ನಾಯಕರು ಶನಿವಾರ ನಿಶ್ಚಯಿಸಿದ್ದಾರೆ. ಇಂಟರ್ನೆಟ್‌ ಎಂಬುದು ಮುಕ್ತ, ಉಚಿತ ಹಾಗೂ ಭದ್ರವಾಗಿರಬೇಕು. ಭಯೋತ್ಪಾದಕರ ಸುರಕ್ಷಿತ ನೆಲೆಯಾಗಬಾರದು ಎಂದು ಈ ನಾಯಕರು ಪ್ರತಿಪಾದಿಸಿದ್ದಾರೆ.

ವಾಣಿಜ್ಯ ಸಮರ ನಿಲ್ಲಿಸೋಣ: ಟ್ರಂಪ್-ಕ್ಸಿ ಅಂದ್ರು ಒಂದಾಗೋಣ!

ಜಪಾನ್‌ನ ಬೃಹತ್‌ ಬಂದರು ನಗರಿ ಒಕಾಸದಲ್ಲಿ ಶುಕ್ರವಾರದಿಂದ ನಡೆದ ಎರಡು ದಿನಗಳ ಜಿ-20 ನಾಯಕರ ಶೃಂಗಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ನಾಯಕರು, ನಮ್ಮಗಳ ನಾಗರಿಕರ ಭದ್ರತೆಯನ್ನು ಕಾಪಾಡಿಕೊಳ್ಳುವುದು ನಾಯಕರಾಗಿ ನಮ್ಮ ಮೇಲಿರುವ ಅತಿದೊಡ್ಡ ಜವಾಬ್ದಾರಿ. ಭಯೋತ್ಪಾದನೆಯನ್ನು ತಡೆಯುವುದು ಹಾಗೂ ಹತ್ತಿಕ್ಕುವುದು ಯಾವುದೇ ದೇಶದ ಮೊತ್ತ ಮೊದಲ ಹೊಣೆ. ಉಗ್ರರ ಇಂಟರ್ನೆಟ್‌ ಬಳಕೆಯಿಂದ ನಮ್ಮ ಜನರನ್ನು ರಕ್ಷಿಸಿಕೊಳ್ಳುವ ಬದ್ಧತೆಯನ್ನು ಒಸಾಕದಲ್ಲಿ ಮತೊಮ್ಮೆ ವ್ಯಕ್ತಪಡಿಸುತ್ತಿದ್ದೇವೆ ಎಂದು ನಾಯಕರು ತಿಳಿಸಿದ್ದಾರೆ.

ಕಿತ್ನಾ ಅಚ್ಛಾ ಹೈ ಮೋದಿ: ಆಸೀಸ್ ಪ್ರಧಾನಿ ಸೆಲ್ಫಿ ನೋಡಿ!

ಒಂದೇ ದಿನ 6 ದೇಶಗಳ ಜತೆ ಮೋದಿ ಮಾತುಕತೆ

ಜಿ-20 ಶೃಂಗಸಭೆಯ ಕೊನೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಆರು ದೇಶಗಳ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇಂಡೋನೇಷ್ಯಾ, ಬ್ರೆಜಿಲ್‌, ಟರ್ಕಿ, ಆಸ್ಪ್ರೇಲಿಯಾ, ಸಿಂಗಾಪುರ ಮತ್ತು ಚಿಲಿ ದೇಶದ ನಾಯಕರ ಜೊತೆ ವ್ಯಾಪಾರ, ಭಯೋತ್ಪಾದನೆ ನಿಗ್ರಹ, ಸಮುದ್ರ ಭದ್ರತೆ ಮತ್ತು ಕ್ರೀಡೆ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ಶುಕ್ರವಾರದಿಂದ ಎರಡು ದಿನ ನಡೆದ ಈ ಶೃಂಗಕ್ಕೆ ಶನಿವಾರ ತೆರೆಬಿದ್ದಿತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಜಪಾನ್‌ ಪ್ರವಾಸ ಮುಗಿಸಿ ಮೋದಿ ಅವರು ಶನಿವಾರ ರಾತ್ರಿ ಭಾರತಕ್ಕೆ ವಾಪಸ್‌ ಆದರು.