ಓಸಾಕಾ(ಜೂ.29): ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ, ಆಸ್ಟ್ರೆಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕ್ಲಿಕ್ಕಿಸಿರುವ ಸೆಲ್ಫಿ ಇದೀಗ ಭಾರೀ ಸದ್ದು  ಮಾಡುತ್ತಿದೆ.

"

ಸಮ್ಮೇಳನದ ಸಭಾಂಗಣದಲ್ಲಿ ಮೋದಿ ಅವರನ್ನು ಕಂಡ ಮಾರಿಸನ್, ಕೂಡಲೇ ತಮ್ಮ ಮೊಬೈಲ್ ಫೋನ್ ಹೊರತೆಗೆದು ಸೆಲ್ಫಿಗಾಗಿ ಬೇಡಿಕೆ ಇಟ್ಟರು. ಆಸೀಸ್ ಪ್ರಧಾನಿ ಜೊತೆ ನಗುನಗುತ್ತಾ ಮೋದಿ ಸೆಲ್ಫಿಗೆ ಪೋಸ್ ನೀಡಿದರು.

ಈ ಫೊಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸ್ಕಾಟ್ ಮಾರಿಸನ್, ಕಿತ್ನಾ ಅಚ್ಛಾ ಹೈ  ಮೋದಿ(ಮೋದಿ ಅದೆಷ್ಟು ಒಳ್ಳೆಯವರು) ಎಂದು ಹಿಂದಿಯಲ್ಲಿ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಮೋದಿ-ಮಾರಿಸನ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಎರಡೂ ರಾಷ್ಟ್ರಗಳಲ್ಲಿ ಈ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.