ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಶಾಸಕ ಜಿ ಟಿ ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದ್ದು, ನೀವು ಎಲ್ಲಿಯ ಸಮಾಜವಾದಿ? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು (ಅ.06): ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಶಾಸಕ ಜಿ ಟಿ ದೇವೇಗೌಡ ತೀರ್ವ ವಾಗ್ದಾಳಿ ನಡೆಸಿದ್ದು, ನೀವು ಎಲ್ಲಿಯ ಸಮಾಜವಾದಿ? ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೀವು ಮೂಕಾಂಬಿಕ ದೇವಸ್ಥಾನದಲ್ಲಿ ಶರ್ಟು ಬಿಚ್ಚಿ ಹೋಮ ಮಾಡಿಲ್ಲವೇ? ತಿರುಪತಿ ದೇವಾಲಯಕ್ಕೆ ಹೋಗಿಲ್ವ ? ದಸರಾ ಮಹೋತ್ಸವದ ಉದ್ಘಾಟನೆ ಸಂದರ್ಭದಲ್ಲಿ ಪ್ರೊ.ನಿಸಾರ್ ಅಹಮದ್ ಅವರ ಜತೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕೂರುತ್ತೀರಿ. ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ನೀವು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದೀರಿ. ನಿಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಯಾವ ಅಧಿಕಾರ ಕೊಟ್ಟಿದ್ದೀರಿ. ಅವರಿಗೆ ಯಾವ ನಿಗಮ ಮಂಡಳಿ ಕೊಟ್ಟಿದ್ದೀರಿ? ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕನಿಷ್ಠ ಪಕ್ಷ ನಿಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರನ್ನು ಕರೆದು ಮಾತನಾಡಿಸಿದ್ದೀರ ? ನಮ್ಮ ಅವಧಿಯಲ್ಲಿ ಎಷ್ಟು ಕಾಲೇಜು ಕೊಟ್ಟಿದ್ದೀರಿ, ಎಷ್ಟು ಶಾಲೆ ಕೊಟ್ಟಿದ್ದೀರಿ ? ಬೇರೆ ಸಮುದಾಯಗಳು ಬೇಡ ಕುರುಬ ಸಮುದಾಯದ ಬೀದಿಗಳಿಗೆ ರಸ್ತೆ ರಿಪೇರಿ ಮಾಡಿಸಿದ್ದೀರಾ ? ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಶ್ನೆಗಳ ಮಳೆಗರೆದಿದ್ದಾರೆ. ಅಲ್ಲದೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಚುನಾವಣೆ ಎದುರಿಸುವುದಾಗಿ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
