Asianet Suvarna News Asianet Suvarna News

ಪರಮೇಶ್ವರ್ ಗೆ ವಿರಾಟ್ ದರ್ಶನ

ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ, ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಮೇಶ್ವರ್, ಸಮಸ್ಯೆ ಗಳಿಗೆ ಶೀಘ್ರವಾಗಿ ಸ್ಪಂದಿಸಿ ಪರಿಹರಿಸುವಂತೆ ತಾಕೀತು ಮಾಡಿದರು. ಶಿವಾಜಿ ನಗರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರದಕ್ಷಿಣೆ ನಡೆಸಿದ ಅವರಿಗೆ ಅಲ್ಲಿನ ಸಮಸ್ಯೆಗಳ ವಿರಾಟ್ ದರ್ಶನವೇ ಆಯಿತು.

G Prameshwar Visited Shivajinagar
Author
Bengaluru, First Published Sep 5, 2018, 8:32 AM IST

ಬೆಂಗಳೂರು :  ಹೂಳು ತುಂಬಿದ ರಾಜಕಾಲುವೆ, ರಸ್ತೆಯಲ್ಲೇ ಕೊಳಚೆ ನೀರು ದುರ್ವಾಸನೆ, ಸೋರುತ್ತಿರುವ ಸ್ಲಂ ಬೋರ್ಡ್, ಬಿಡಿಎ ನಿರ್ಮಿಸಿಕೊಟ್ಟಿದ್ದ ಹಳೆಯ ಮನೆಗಳು, ಶಿಥಿಲಗೊಂಡ ಸರ್ಕಾರಿ ಶಾಲೆ, ಉಪಯೋಗಕ್ಕೆ ಬಾರದ ಜಿಮ್. ಇವೆಲ್ಲಾ, ಮಂಗಳವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರದಕ್ಷಿಣೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಕಂಡುಬಂದ ನಗರದ ಸಮಸ್ಯೆಗಳ ವಿರಾಟ್ ದರ್ಶನ. 

ಹೋದ ಕಡೆಗಳಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳು ಸುರಿಮಳೆ, ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಮೇಶ್ವರ್, ಸಮಸ್ಯೆ ಗಳಿಗೆ ಶೀಘ್ರವಾಗಿ ಸ್ಪಂದಿಸಿ ಪರಿಹರಿಸುವಂತೆ ತಾಕೀತು ಮಾಡಿದರು. ಪರಮೇಶ್ವರ್ ಮಂಗಳವಾರ ತಮ್ಮ 2 ನೇ ದಿನ  ದ ನಗರ ಪ್ರದಕ್ಷಿಣೆ ನಡೆಸಿದರು. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಹಲವೆಡೆ ಸಂಚರಿಸಿ ಸ್ಥಳೀಯ ಶಾಸಕ ರೋಷನ್ ಬೇಗ್ ಅವರೊಂದಿಗೆ ಕ್ಷೇತ್ರ ಸಮಸ್ಯೆಗಳನ್ನು ಪರಿಶೀಲಿಸಿ ದರು. 

ಕೊಳಚೆ ಪ್ರದೇಶಗಳಿಗೂ ಭೇಟಿ ನೀಡಿ ಸ್ಥಳೀಯರ ಕುಂದುಕೊರತೆ ಆಲಿಸಿ ಅಲ್ಲಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಮೇಶ್ವರ್ ಅವರು ಯಲ್ಲಮ್ಮ ಕೋಳಿ ಸ್ಟ್ರೀಟ್‌ಗೆ ಭೇಟಿ ನೀಡಿದಾಗ ಅಲ್ಲಿನ ಕೊಳಗೇರಿಯಲ್ಲಿ 25 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ 27 ಮನೆಗಳು ಶಿಥಿಲಗೊಂಡಿದ್ದು, ಮಳೆಗೆ ಸೋರುತ್ತವೆ. ಇದರಿಂದ ವಾಸ ಮಾಡಲಾಗುತ್ತಿಲ್ಲ. ಸರ್ಕಾರ ಇವುಗಳನ್ನು ದುರಸ್ತಿಗೊಳಿಸಬೇಕೆಂದು ಅಲ್ಲಿನ ನಿವಾಸಿಗಳು ಮನವಿ ಮಾಡಿದರು. 

ಈ ವೇಳೆ ಶಾಸಕ ರೋಷನ್‌ಬೇಗ್, ಹಳೇ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ನಿರ್ಮಿಸಿಕೊಡುವುದಕ್ಕೆ ನಿಮಗೆ ಒಪ್ಪಿಗೆ ಇದೆಯೇ ಎಂದು ಪ್ರಶ್ನಿಸಿದಾಗ ಸ್ಥಳೀಯರು ಸಮ್ಮತಿ ವ್ಯಕ್ತಪಡಿಸಿದರು. ಬಳಿಕ ಪರಮೇಶ್ವರ್ ಕೊಳಚೆ ನಿರ್ಮೂ ಲನಾ ಮಂಡಳಿಯಿಂದ ಸ್ಥಳದಲ್ಲಿ ಹೊಸ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಹಕ್ಕುಪತ್ರಕ್ಕೆ ಮನವಿ: ಬಳಿಕ ಮುನಿವೆಂಕಟಪ್ಪ ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು, ಕಾಲೋನಿಯ 546 ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳು ಸಾಕಷ್ಟು ಶಿಥಿಲಗೊಂಡಿವೆ. ಕಳೆದ ೪೫ ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಮನೆಗಳ ಜಾಗವನ್ನು 99 ವರ್ಷಗಳ ಭೋಗ್ಯಕ್ಕೆ ನೀಡಲಾಗಿದೆ. ಆ ಜಾಗದ ಹಕ್ಕು ಪತ್ರವನ್ನು ಸರ್ಕಾರದಿಂದ ತಮಗೆ ಕೊಡಿಸುವಂತೆ ಪರಮೇಶ್ವರ್ ಅವರಿಗೆ ಮನವಿ ಮಾಡಿದರು. 

ಇದಕ್ಕೆ ಸಚಿವರು, ಶಿಥಿಲಗೊಂಡಿರುವ ಮನೆ  ಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮರು ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಮೇಯರ್ ಸಂಪತ್ ರಾಜ್, ಬಿವಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಇತರರು ಹಾಜರಿದ್ದರು. 

Follow Us:
Download App:
  • android
  • ios