ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಶಾಸಕರಾದ ಅಶೋಕ್ ಖೇಣಿ, ಆನಂದ್‌ಸಿಂಗ್, ನಾಗೇಂದ್ರ ಅವರ ಮೇಲೆ ಕಳಂಕ ಇರಬಹುದು. ಆದರೆ, ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಯಾವುದೇ ಹಂತದಲ್ಲೂ ಪರ ವಕಾಲತ್ತು ವಹಿಸುವುದಿಲ್ಲ’

ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಕೆಲವು ಆರೋಪಿ ಶಾಸಕರ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಅವರು, ಈ ಶಾಸಕರ ಮೇಲಿನ ಆರೋಪಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಶಾಸಕರಾದ ಅಶೋಕ್ ಖೇಣಿ, ಆನಂದ್‌ಸಿಂಗ್, ನಾಗೇಂದ್ರ ಅವರ ಮೇಲೆ ಕಳಂಕ ಇರಬಹುದು. ಆದರೆ, ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಯಾವುದೇ ಹಂತದಲ್ಲೂ ಪರ ವಕಾಲತ್ತು ವಹಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯಾಯಾಲಯ ನಿರ್ದೋಷಿ ಅಥವಾ ಅಪರಾಧಿ ಎಂದು ಯಾವುದೇ ತೀರ್ಪು ನೀಡಿದರೂ ಅದಕ್ಕೆ ಸದರಿ ಶಾಸಕರೇ ಹೊಣೆ ಯಾಗಿರುತ್ತಾರೆ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದರು. ನಾಗೇಂದ್ರ ಹಾಗೂ ಆನಂದ ಸಿಂಗ್ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಇದೆ. ಅಶೋಕ್ ಖೇಣಿ ಅವರ ಮೇಲೆ ನೈಸ್ ರಸ್ತೆ ಭೂಕಬಳಿಕೆ ಆರೋಪ ಇದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಮರ್ಥ ನಾಯಕತ್ವ ಹಾಗೂ ಗೆಲ್ಲುವ ಖಾತ್ರಿ ಇದ್ದರೆ ಸಚಿವರು, ಶಾಸಕರು ಹಾಗೂ ಪ್ರಭಾವಿಗಳ ಮಕ್ಕಳಿಗೆ ಟಿಕೆಟ್ ನೀಡಲಾಗುವುದು ಎಂದರು.