MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Education
  • ನೆಲಮಂಗಲ ಬಳಿ ಕೆಟ್ಟು ನಿಂತ ರೈಲಿನಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರದಾಟ

ನೆಲಮಂಗಲ ಬಳಿ ಕೆಟ್ಟು ನಿಂತ ರೈಲಿನಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರದಾಟ

ನೆಲಮಂಗಲ ಬಳಿ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಪರಿಣಾಮ ಇದೇ ರೈಲಿನಲ್ಲಿ ಸಾಗುತ್ತಿದ್ದ ನೀಟ್ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇತ್ತ ಬೇರೆ ರೈಲಿಗೆ ಮಾರ್ಗವಿಲ್ಲದೆ ಸಂಚಾರ ಅಸ್ತವ್ಯಸ್ತಗೊಂಡಿದೆ. 

1 Min read
Author : Chethan Kumar
Published : Jun 21 2026, 12:28 PM IST
Share this Photo Gallery
  • FB
  • TW
  • Linkdin
  • Whatsapp
16
ನೀಟ್ ವಿದ್ಯಾರ್ಥಿಗಳಿಗೆ ಕೈಕೊಟ್ಟ ರೈಲು
Image Credit : Asianet News

ನೀಟ್ ವಿದ್ಯಾರ್ಥಿಗಳಿಗೆ ಕೈಕೊಟ್ಟ ರೈಲು

ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯುತ್ತಿದೆ. ಪೇಪರ್ ಲೀಕ್ ಕಾರಣದಂದ ರದ್ದಾಗಿದ್ದ ನೀಟ್ ಪರೀಕ್ಷೆಯನ್ನು ಭಾರಿ ಬಂದೋಬಸ್ತ್ ಮೂಲಕ ನಡೆಸಲಾಗುತ್ತಿದೆ. ವ್ಯಾಪಕ ಟೀಕೆ ಬಳಿಕ ಈ ಬಾರಿ ನೀಟ್ ಪರೀಕ್ಷೆ ಮೇಲೆ ಕೇಂದ್ರ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಜೊತೆಗೆ ನಿಯಮಗಳನ್ನು ಕಠಿಣಗೊಳಿಸಿದೆ. ಆದರೆ ಈ ನೀಟ್ ಪರೀಕ್ಷೆಗೆ ಸಮಯಕ್ಕಿಂತ ಮೊದಲೇ ಹಾಜಾರಗಲು ರೈಲು ಮೂಲಕ ತೆರಳಿದ ಕೆಲ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಒಂದು ಗಂಟೆಯಿಂದ ಕೆಟ್ಟು ನಿಂತ ರೈಲು
Image Credit : Asianet News

ಒಂದು ಗಂಟೆಯಿಂದ ಕೆಟ್ಟು ನಿಂತ ರೈಲು

ನೆಲಮಂಗಲ ತಾಲೂಕಿನ ಸೋಲೂರು ಬಳಿ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಸೊಲ್ಲಾಪುರದ ಕಡೆ ಸಾಗುತ್ತಿದ್ದ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ರೈಲು ಕೆಟ್ಟು ನಿಂತಿದೆ. ಸುಮಾರು ಒಂದು ಗಂಟೆಯಿಂದು ರೈಲು ನಿಂತಲ್ಲೇ ನಿಂತಿದೆ. ರೈಲು ಹೊರಡಲಿದೆ ಎಂದು ಕಾಯುತ್ತಿದ್ದ ವಿದ್ಯಾರ್ಥಿಗಳು ಆತಂಕಗೊಂಡಿರುವ ಘಟನೆ ನಡೆದಿದೆ.

Related Articles

Related image1
Indian Railway: ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ 'ಯಶವಂತಪುರ ರೈಲು ಸೇವೆ' ವಿಸ್ತರಿಸಿದ ರೈಲ್ವೆ ಇಲಾಖೆ!
Related image2
ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ
36
ಯಶವಂತಪುರ ಕಡೆ ಬರುತ್ತಿದ್ದ ರೈಲಿಗೂ ಸಮಸ್ಯೆ
Image Credit : Asianet News

ಯಶವಂತಪುರ ಕಡೆ ಬರುತ್ತಿದ್ದ ರೈಲಿಗೂ ಸಮಸ್ಯೆ

ಸೋಲೂರು ಬಳಿ ರೈಲು ಕೆಟ್ಟು ನಿಂತ ಪರಿಣಾಮ ಇತ್ತ ಹಾಸಸನಿಂದ ಯಶವಂತಪುರದತ್ತ ಬರುತ್ತಿದ್ದ ರೈಲಿಗೂ ಸಮಸ್ಯೆಯಾಗಿದೆ. ರೈಲು ಕೆಟ್ಟು ನಿಂತ ಕಾರಣದಿಂದ ಟ್ರಾಕ್ ಇಲ್ಲದೆ ಯಶವಂತಪುರದತ್ತ ರೈಲು ಸಾಗಲು ಸಾಧ್ಯವಾಗದೇ ನಿಂತಿದೆ. ಎರಡೂ ರೈಲುಗಳಲ್ಲಿರುವ ವಿದ್ಯಾರ್ಥಿಗಳು ಸಮಸ್ಯೆಯಿಂದ ತೀವ್ರ ಪರಿತಪಿಸುವಂತಾಗಿದೆ.

46
ಬದಲಿ ವ್ಯವಸ್ಥೆ ಮೂಲಕ ಬೆಂಗಳೂರು ಕಡೆ ವಿದ್ಯಾರ್ಥಿಗಳು
Image Credit : Asianet News

ಬದಲಿ ವ್ಯವಸ್ಥೆ ಮೂಲಕ ಬೆಂಗಳೂರು ಕಡೆ ವಿದ್ಯಾರ್ಥಿಗಳು

ಸುಮಾರು ಒಂದು ಗಂಟೆಯಿಂದ ಸಮಸ್ಯೆ ಬಗೆ ಹರಿಯುವ ವಿಶ್ವಾಸದಲ್ಲಿದ್ದ ವಿದ್ಯಾರ್ಥಿಗಳು ಕೊನೆಗೆ ಪರೀಕ್ಷೆಗೆ ಸಮಯ ಸಮಸ್ಯೆ ಎದುರಾಗುತ್ತಿದ್ದಂತೆ ಬದಲಿ ವ್ಯವಸ್ಥೆ ಮೂಲಕ ಬೆಂಗಳೂರಿನತ್ತ ಸಾಗುತ್ತಿದ್ದಾರೆ. ನೀಟ್ ವಿದ್ಯಾರ್ಥಿಗಳು ಬೇಗನೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಹೀಗಾಗಿ ವಿದ್ಯಾರ್ಥಿಗಳು ಬದಲಿ ವ್ಯವಸ್ಥೆ ಮೂಲಕ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

56
ನೀಟ್ ಪರೀಕ್ಷೆ ಪಕ್ರಿಯೆ
Image Credit : Asianet News

ನೀಟ್ ಪರೀಕ್ಷೆ ಪಕ್ರಿಯೆ

ದೇಶಾದ್ಯಂತ ನೀಟ್ ಪರೀಕ್ಷೆ ಇಂದು ನಡೆಯಲಿದೆ. 11 ಗಂಟೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಬಯೋ ಮೆಟ್ರಿಕ್ ಪ್ರಕ್ರಿಯೆ ಬಳಿಕ ಶಿಕ್ಷಕರು, ಸಿಬ್ಬಂದಿಗಳು ಪರೀಕ್ಷಾರ್ಥಿಗಳ ವಿವರ ಪರಿಶೀಲನೆ ನಡೆಸುತ್ತಾರೆ. ತಪಾಸಣೆ ಬಳಿಕ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತದೆ.

66
ಪರೀಕ್ಷೆ ಸಮಯ
Image Credit : Asianet News

ಪರೀಕ್ಷೆ ಸಮಯ

ಪರೀಕ್ಷಾರ್ಥಿಗಳಿಗೆ 1.40 ಗೆ ಬುಕ್ ಲೇಟ್ ಕೊಡಲಾಗುತ್ತೆ. ಮೊದಲು OMR ಮಾತ್ರ ಓಪನ್ ಮಾಡಲಾಗುತ್ತೆ.. ಬಳಿಕ ಅಟೆಂಡೆನ್ಸ್ ತೆಗೆದುಕೊಳ್ಳಲಾಗುತ್ತೆ. 2 ಗಂಟೆಗೆ ಬೆಲ್ ಆದ್ಮೇಲೆ 5.15 ವರೆಗೂ ಪರೀಕ್ಷೆ ನಡೆಯಲಿದೆ. ಅಂಗವಿಕಲರಿಗೆ 6.30 ವರೆಗೂ ಪರೀಕ್ಷೆ ಬರೆಯಲು ಅವಕಾಶ ಇರಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನೀಟ್
ಪರೀಕ್ಷೆ
ಬೆಂಗಳೂರು
ಭಾರತೀಯ ರೈಲ್ವೆ

Latest Videos
Recommended Stories
Recommended image1
ಬೆಂಗಳೂರಿನ ಸರ್ಕಾರಿ ಶಾಲೆ ಸಮಯ ಬದಲಾವಣೆ ಸಾಧ್ಯತೆ: ಸಚಿವರಿಗೆ ಶಿಕ್ಷಕರ ಮನವಿ ಸಲ್ಲಿಕೆ
Recommended image2
8 ಪಿಜಿ ಕೋರ್ಸ್ ರದ್ದುಗೊಳಿಸಿದ ಸರ್ಕಾರ; ಎಂಎ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರಕ್ಕೆ ಅನುಮತಿಯೇ ಇಲ್ಲ!
Recommended image3
38 ವರ್ಷದ ಸೇವೆ, ಕೊನೆ ಗಂಟೆ ಬಾರಿಸಿದ ದಾಸ್ ಅಂಕಲ್: ಬೆಂಗಳೂರಿನ ಭಾವುಕ ವಿಡಿಯೋ ಹಂಚಿದ ಮಹೀಂದ್ರಾ
Related Stories
Recommended image1
Indian Railway: ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ 'ಯಶವಂತಪುರ ರೈಲು ಸೇವೆ' ವಿಸ್ತರಿಸಿದ ರೈಲ್ವೆ ಇಲಾಖೆ!
Recommended image2
ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved