ಕರ್ನಾಟಕದಲ್ಲಿ ದಲಿತ ಮುಖಂಡರಿಗೆ ಅಧ್ಯಕ್ಷ ಪಟ್ಟ ಕೊಡುವ ಚಿಂತನೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವಾರು ದಿನಗಳಿಂದ ಇದೆ. ಕೇಂದ್ರ ವಿಪಕ್ಷ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ಗಾದಿ ಕೊಡುವ ಇಚ್ಛೆ ಸೋನಿಯಾ ಗಾಂಧಿಯವರಿಗಿತ್ತೆನ್ನಲಾಗಿದೆ. ಆದರೆ, ಖರ್ಗೆ ಸದ್ಯಕ್ಕೆ ರಾಜ್ಯ ರಾಜಕೀಯಕ್ಕೆ ಮರಳುವ ಇಚ್ಛೆ ತೋರಲಿಲ್ಲ. ಹೀಗಾಗಿ, ಮತ್ತೊಬ್ಬ ಪ್ರಮುಖ ದಲಿತ ಮುಖಂಡರೆಂದು ಪರಿಗಣಿಸಲಾದ ಜಿ.ಪರಮೇಶ್ವರ್ ಅವರನ್ನೇ ಕೆಪಿಸಿಸಿ ಗಾದಿಯಲ್ಲಿ ಮುಂದುವರಿಸುವುದು ಅನಿವಾರ್ಯವಾಗಿದೆ.

ಬೆಂಗಳೂರು(ಮೇ 25): ಈ ಬಾರಿಯೂ ದಲಿತರೇ ರಾಜ್ಯ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಜಿ.ಪರಮೇಶ್ವರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ಸುವರ್ಣನ್ಯೂಸ್'ಗೆ ತಿಳಿಸಿವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೈಕಮಾಂಡ್ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ. ಒಂದು ವೇಳೆ ಈ ಸುದ್ದಿ ನಿಜವಾದಲ್ಲಿ, ಡಿ.ಕೆ.ಶಿವಕುಮಾರ್, ಎಂಬಿ ಪಾಟೀಲ್, ಎಸ್ಸಾರ್ ಪಾಟೀಲ್ ಮೊದಲಾದವರ ಕೆಪಿಸಿಸಿ ಪಟ್ಟದ ಕನಸು ಭಗ್ನಗೊಂಡಂತಾಗುತ್ತದೆ.

ಮೊದಲೇ ಹೇಳಿದಂತೆ, ಕರ್ನಾಟಕದಲ್ಲಿ ದಲಿತ ಮುಖಂಡರಿಗೆ ಅಧ್ಯಕ್ಷ ಪಟ್ಟ ಕೊಡುವ ಚಿಂತನೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವಾರು ದಿನಗಳಿಂದ ಇದೆ. ಕೇಂದ್ರ ವಿಪಕ್ಷ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ಗಾದಿ ಕೊಡುವ ಇಚ್ಛೆ ಸೋನಿಯಾ ಗಾಂಧಿಯವರಿಗಿತ್ತೆನ್ನಲಾಗಿದೆ. ಆದರೆ, ಖರ್ಗೆ ಸದ್ಯಕ್ಕೆ ರಾಜ್ಯ ರಾಜಕೀಯಕ್ಕೆ ಮರಳುವ ಇಚ್ಛೆ ತೋರಲಿಲ್ಲ. ಹೀಗಾಗಿ, ಮತ್ತೊಬ್ಬ ಪ್ರಮುಖ ದಲಿತ ಮುಖಂಡರೆಂದು ಪರಿಗಣಿಸಲಾದ ಜಿ.ಪರಮೇಶ್ವರ್ ಅವರನ್ನೇ ಕೆಪಿಸಿಸಿ ಗಾದಿಯಲ್ಲಿ ಮುಂದುವರಿಸುವುದು ಅನಿವಾರ್ಯವಾಗಿದೆ.