ಘಟನೆಯ ಕುರಿತು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಸೇನೆ ಈ ಕುರಿತು ವಿಸ್ತೃತ ತನಿಖೆಯ ಭರವಸೆ ನೀಡಿದೆ. ಮತ್ತೊಂ​ದೆಡೆ ಸರ್ಕಾರ ಕೂಡಾ ಘಟನೆ ಕುರಿತು ವರದಿ ಕೇಳಿದೆ.

ಶ್ರೀನಗರ: ಪ್ರಾಣ ರಕ್ಷಣೆ ನಿಟ್ಟಿನಲ್ಲಿ, ರಾಷ್ಟ್ರೀಯ ರೈಫಲ್ಸ್‌ ನ ಯೋಧರು, ಫಾರುಖ್‌ ಧರ್‌ ಎಂಬ ಕಾಶ್ಮೀರಿ ಯುವಕನೊಬ್ಬನನ್ನು ಜೀಪ್‌ನ ಬಾನೆಟ್‌ಗೆ ಕಟ್ಟಿಮಾನವ ತಡೆಗೋಡೆಯಾಗಿ ಬಳಸಿಕೊಂಡ ಪ್ರಕರಣವೊಂದು ಜಮ್ಮು ಮತ್ತು ಕಾಶ್ಮೀರದ ಬುದ್ಗಾಂನಲ್ಲಿ ನಡೆದಿದೆ. ಗುರುವಾರ ನಡೆದ ಉಪಚುನಾವಣೆಯ ವೇಳೆ ನಡೆಯಿತು ಎನ್ನಲಾದ ಈ ಘಟನೆಯ ವಿಡಿಯೋವೊಂದು ಇದೀಗ ಬಹಿರಂ​ಗ​ವಾ​ಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಘಟನೆಯ ಕುರಿತು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಸೇನೆ ಈ ಕುರಿತು ವಿಸ್ತೃತ ತನಿಖೆಯ ಭರವಸೆ ನೀಡಿದೆ. ಮತ್ತೊಂ​ದೆಡೆ ಸರ್ಕಾರ ಕೂಡಾ ಘಟನೆ ಕುರಿತು ವರದಿ ಕೇಳಿದೆ.

ಆಗಿದ್ದೇನು?: ಕಾಶ್ಮೀರದ ಬದ್ಗಾಂನಲ್ಲಿ ಏ.9ರ ಅನಂತನಾಗ್‌ ಉಚುನಾವಣೆ ದಿನ 12 ಚುನಾವಣಾ ಸಿಬ್ಬಂದಿ, 9 ಐಟಿಬಿಪಿ ಯೋಧರು ಹಾಗೂ ಇಬ್ಬರು ಪೊಲೀಸರು ವಾಹನದಲ್ಲಿ ಸಾಗುತ್ತಿದ್ದಾಗ ಮನೆಗಳ ಮೇಲೆ ನಿಂತಿದ್ದ ಮಹಿಳೆಯರು ಸೇರಿ 500 ಜನ ಸೇರಿ ಈ ತಂಡದ ಮೇಲೆ ಕಲ್ಲು ಎಸೆಯತೊಡಗಿದ್ದರು.

ಆಗ 15 ಜನರ ಸೇನಾ ಕ್ಷಿಪ್ರಪಡೆಯನ್ನು ರಕ್ಷಣೆಗೆ ಕರಿಸಿಕೊಳ್ಳಲಾಯಿತಾದರೂ, ಕಲ್ಲೆಸೆತಗಾರರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಈ ವೇಳೆ ತಮ್ಮ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಕಲ್ಲೆಸೆತಗಾರರ ಕೈಯಲ್ಲಿ ಸಿಕ್ಕರೆ ಸಾವೇ ಗತಿ ಎಂದು ಸೇನೆಯವರಿಗೆ ಖಚಿತಪಟ್ಟಿತು. ಕಲ್ಲೆಸೆತಗಾರರ ಮೇಲೆ ಗುಂಡು ಹಾರಿಸುವ ಅವಕಾಶ ಇತ್ತಾದರೂ ಭಾರೀ ಪ್ರಮಾಣದಲ್ಲಿ ಸಾವು-ನೋವು ಆಗುತ್ತದೆ ಎಂದು ಆ ಸೇನಾ ತಂಡದ ಮುಂದಾಳತ್ವ ವಹಿಸಿದ್ದ ಯುವ ಕಮಾಂಡರ್‌ ದೂರಾಲೋಚನೆ ಮಾಡಿದರು.

ಹೀಗಾಗಿ ಕಲ್ಲು ಎಸೆಯುವವನೊಬ್ಬನನ್ನು ಹಿಡಿದು ಜೀಪಿನ ಬಾನೆಟ್‌ ಮುಂಭಾಗದ ಸ್ಟೆಪ್ನಿಗೆ ಕಟ್ಟಿದರು. ಆಗ ಸೇನೆಯವರ ಮೇಲೆ ಕಲ್ಲೆಸೆದರೆ ಆತನಿಗೂ ತಾಗುತ್ತಿತ್ತು. ಹೀಗಾಗಿ ಕಲ್ಲೇಟುಗಳು ತಂತಾನೇ ನಿಂತವು. ಈ ಉದ್ರಿಕ್ತ ಪ್ರದೇಶದ ಮೂಲಕ ಸೇನಾ ತಂಡ ಹಾಗೂ ಚುನಾವಣಾ ಸಿಬ್ಬಂದಿಗಳು ನಿರಾತಂಕ​ವಾಗಿ ಸಾಗಿದರು. ಜೀಪಿನ ಸ್ಟೆಪ್ನಿಗೆ ಕಟ್ಟಲ್ಪಟ್ಟಿದ್ದ ಯುವಕ​ನನ್ನು ಬಳಿಕ ಸೇನೆಯವರು ಪೊಲೀಸರಿಗೆ ಒಪ್ಪಿಸಿದರು.

ಶ್ರೀನಗರ: ಜಮ್ಮು-ಕಾಶ್ಮೀರದ ಬದ್ಗಾಂ ಪಟ್ಟ​ಣದಲ್ಲಿ ಏಪ್ರಿಲ್‌ 9ರಂದು ನಡೆದ ಶ್ರೀನಗರ ಲೋ​ಕ​ಸಭಾ ಉಪ​ಚುನಾವಣೆ ದಿನ ಸಿಆರ್‌ಪಿಎ​ಫ್‌ ಯೋಧ​ನೊಬ್ಬ ನನ್ನು ಥಳಿ ಸಿದ ಪ್ರಕರಣಕ್ಕೆ ಸಂ​​ಬಂ​​ಧಿ​ಸಿ​ದಂತೆ ಶುಕ್ರವಾರ 5 ಜನರನ್ನು ಬಂಧಿಸಲಾ​ಗಿದೆ. ಯೋಧನನ್ನು ಪಾಕಿಸ್ತಾನ ಪರ ಧೋರಣೆ ಹೊಂದಿರುವ ಕೆಲ ಕಾಶ್ಮೀರಿ ಪುಂಡರು ಹೊಡೆದಿದ್ದರು. ಆದರೂ ತಾಳ್ಮೆ ವಹಿಸಿದ ಯೋಧ ಪುಂಡರ ಮೇಲೆ ಯಾವ ಪ್ರತೀಕಾರಕ್ಕೂ ಮುಂದಾಗದೇ ಸುಮ್ಮನಿದ್ದ. ಈ ದೃಶ್ಯವನ್ನು ಯಾರೋ ದಾರಿಹೋಕರು ಚಿತ್ರೀಕರಿಸಿ ಇಂಟರ್ನೆಟ್‌ನಲ್ಲಿ ಹರಿಬಿಟ್ಟಿದ್ದರು. ಇದೇ ವೇಳೆ ಘಟನೆ ನಡೆದ ದಿನ ಒಂದು ವೇಳೆ ಯೋಧರು ಸಂಯಮ ತೋರದೇ ಇದ್ದಲ್ಲಿ ಭಾರೀ ಅಪಾಯದ ಸಾಧ್ಯತೆ ಇತ್ತು. ಕೈಯಲ್ಲಿ ಶಸ್ತ್ರಾಸ್ತ್ರ ಹೊಂದಿದ್ದರೂ, ದಾಳಿಗೊಳಗಾದ ಯೋಧ ಅಪರೂಪದ ತಾಳ್ಮೆ ಪ್ರದರ್ಶಿಸಿದ್ದಾನೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.