ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶಉತ್ತಮ ಗುಣಮಟ್ಟದ ಪೀಠೋಪಕರಣಗಳ ಪ್ರದರ್ಶನ ಮತ್ತು ಮಾರಾಟಗ್ರಾಹಕರ ಅನುಕೂಲಕ್ಕಾಗಿ ತಕ್ಕಂತೆ ಇಎಂಐ ಸೌಲಭ್ಯಹೊಸ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಉಚಿತವಾಗಿ ಮನೆ ಬಾಗಿಲಿಗೆ
ಬೆಂಗಳೂರು: ‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್’ ಪ್ರಸ್ತುತ ಪಡಿಸುತ್ತಿರುವ ಇಂಡಿಯಾ ಈವೆಂಟ್ಸ್ ಮತ್ತು ಎಕ್ಸಿಬಿಷನ್ಸ್ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಂಡಿರುವ ‘ಇಂಡಿಯಾ ಫರ್ನಿಚರ್ ಆ್ಯಂಡ್ ಹೋಮ್ ಡೆಕೋರ್ ಎಕ್ಸ್‌ಪೋ’ಗೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.
ಅತ್ಯಾಧುನಿಕ ಶೈಲಿ ಹಾಗೂ ವಿಭಿನ್ನ ರೀತಿಯಲ್ಲಿ ವಿನ್ಯಾಸದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನಾನಾ ಬ್ರ್ಯಾಂಡ್‌ಗಳ ಪೀಠೋಪಕರಣಗಳ ಮೇಳವನ್ನು ಚಲನಚಿತ್ರ ನಟಿ ರಾಧಿಕಾ ಚೇತನ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಶುಕ್ರವಾರದಿಂದ ನಾಲ್ಕು ದಿನಗಳ ನಡೆಯಲಿರುವ ಮೇಳದಲ್ಲಿ ಸುಮಾರು 70ಕ್ಕೂ ಹೆಚ್ಚು ಪೀಠೋಪಕರಣಗಳ ಮಳಿಗೆಗಳು, ಮಾಡ್ಯುಲರ್ ಕಿಚನ್ಸ್‌ನ ಹಲವಾರು ಕಂಪನಿಗಳ ವಿಭಿನ್ನ ಶೈಲಿಯ ಉಪಕರಣಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಆಕರ್ಷಕವಾದ ಪೀಠೋಪಕರಣಗಳನ್ನು ಖರೀದಿಸಲು ನಗರ ವಾಸಿಗಳು ಮುಂದಾಗುತ್ತಿದ್ದಾರೆ. ಅವರ ಇಚ್ಛೆಗೆ ಅನುಗುಣವಾಗಿ ಮತ್ತು ಗುಣಮಟ್ಟದ ಪೀಠೋಪಕರಣಗಳ ಮೇಳ ವನ್ನು ‘ಕನ್ನಡಪ್ರಭ, ಸುವರ್ಣ ನ್ಯೂಸ್’ ಆಯೋಜಿಸಿರುವುದು ಸಂತಸದ ವಿಷಯ.
- ರಾಮಚಂದ್ರಪ್ಪ ಮಾಜಿ ಮೇಯರ್
ಮೇಳ ಪ್ರವೇಶಿಸುತ್ತಿದ್ದಂತೆ ಆಕರ್ಷಕ ಪೀಠೋಪಕರಣಗಳು, ಬಗೆಬಗೆಯ ಸೆವಿಶುಯ್ಯಾಲೆಗಳು ಗ್ರಾಹಕರನ್ನು ಸ್ವಾಗತಿಸುತ್ತಿವೆ. ಅಲ್ಲದೆ, ಕೊಳ್ಳುವವರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಇಲ್ಲಿ ಸಿಗಲಿವೆ. ಟೀಕ್‌ವುಡ್‌ನಿಂದ ಮಾಡಿರುವ ನಾನಾ ವಿನ್ಯಾಸದ ಮಂಚ, ಆಸನ, ವಾರ್ಡ್‌ರೋಬ್, ಡ್ರೆಸ್ಸಿಂಗ್ ಟೇಬಲ್, ಸಂಪೂರ್ಣ ಬೆಡ್‌ರೂಮ್ ಸೆಟ್, ಅಲ್ಲದೆ, ಕಿಚನ್ ಕ್ಯಾಬಿನೆಟ್, ಕಚೇರಿ ಪೀಠೋಪಕರಣ, ಡೈನಿಂಗ್ ಟೇಬಲ್ ಇತ್ಯಾದಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದೆ. ಪ್ರತಿ ಮಳಿಗೆಯವರೂ ಆಯಾ ಕಂಪನಿಯ ಪೀಠೋಪಕರಣಗಳ ದರ ಪಟ್ಟಿ ನೀಡಿದ್ದು, ಮೂಲ ದರದ ಮೇಲೆ ಶೇ.10ರಿಂದ 50ರ ವರೆಗೂ ರಿಯಾಯಿತಿ ಇದೆ.
ಮೇಳದಲ್ಲಿ ನಾನಾ ಬಗೆಯ ಪೀಠೋಪಕರಣಗಳನ್ನು ಕಾಣಬಹುದಾಗಿದೆ. ಎಲ್ಲಾ ರೀತಿಯ ಪೀಠೋಪಕರಣಗಳು ಒಂದೇ ಸೂರಿನಡಿ ಸಿಗುವುದರಿಂದ ಗ್ರಾಹಕರಿಗೆ ಆಯ್ಕೆಯ ಅವಕಾಶ ಹೆಚ್ಚಾಗಿದೆ.
- ಶಂಕರ್, ಬೆಂಗಳೂರು ನಿವಾಸಿ
ಹಳೆಯ ಸಾಂಪ್ರದಾಯದ ಶೈಲಿ ಹಾಗೂ ನೂತನವಾಗಿ ನಿರ್ಮಿಸಿರುವ ಮನೆಗಳಿಗೆ ಹೊಂದಿಕೊಳ್ಳುವಂತಹ ಅತ್ಯಾಧುನಿಕವಾದ ಪೀಠೋಪಕರಣಗಳು ಮೇಳದಲ್ಲಿ ಲಭ್ಯವಿವೆ. ತಮ್ಮ ಮನೆ ಹಾಗೂ ಬೆಲೆಗೆ ತಕ್ಕಂತಹ ಚೇರ್, ಕುರ್ಚಿ ಹಾಗೂ ಟೀಪಾಯಿ ಸೇರಿದಂತೆ ವಿವಿಧ ರೀತಿಯ ಫರ್ನೀಚರ್ಸ್‌ಗಳು ಲಭ್ಯವಾಗಲಿದೆ.
ಅಲ್ಲದೆ, ದೇಶದ ಪ್ರತಿಷ್ಠಿತ ಫರ್ನೀಚರ್ ಕಂಪನಿಗಳು ಹಾಗೂ ಅಲಂಕಾರಿಕ ವಸ್ತುಗಳ ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ.
ಮೇಳದಲ್ಲಿ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಹಲವಾರು ವರ್ಷಗಳಿಂದ ಈ ರೀತಿಯ ಮೇಳ ಆಯೋಜನೆ ಮಾಡಿರಲಿಲ್ಲ. ಈಗ ಆರಂಭವಾಗಿರುವ ಮೇಳದಿಂದ ನಗರದ ಗ್ರಾಹಕರಿಗೆ ಅನುಕೂಲಕರವಾಗಿದೆ.
-ಪ್ರಕಾಶ್, ಬೆಂಗಳೂರು ನಿವಾಸಿ
ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಮಹಿಳೆಯರ ನೆಚ್ಚಿನ ಮಳಿಗೆಗಳು ಮೇಳದಲ್ಲಿದ್ದು, ಅಡುಗೆ ಮನೆಗೆ ಬೇಕಾದ ವಸ್ತುಗಳೂ ಲಭ್ಯವಿವೆ. ಚಪಾತಿ ಮಾಡುವ ಸಾಧನಗಳು ಸೇರಿದಂತೆ ವಿಭಿನ್ನ ರೀತಿಯ ಅಡುಗೆ ಮನೆ ಉಪಕರಣಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ.
ಅದೇ ರೀತಿ ಮಾರ್ಬಲ್‌ನಲ್ಲಿ ಚಿತ್ರಿಸಿರುವ ಬುದ್ಧನ ಪ್ರತಿಮೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಸುಮಾರು 20 ಸಾವಿರದಿಂದ ಎರಡು ಲಕ್ಷದವರೆಗಿನ ವಿವಿಧ ಕಂಪನಿಗಳ ಸೋಫಾಗಳನ್ನು ಮೇಳದಲ್ಲಿವೆ.
ಸುಲಭ ಇಎಂಐ ಸೌಲಭ್ಯ
ಮೇಳದಲ್ಲಿ ಪೀಠೋಪಕರಣಗಳ ಖರೀದಿ ಮಾಡುವ ವವರಿಗೆ ಎಲ್ಲಾ ಬ್ಯಾಂಕ್‌ಗಳ ಕಾರ್ಡ್ ಬಳಸಲು ಅವಕಾಶವಿದೆ. ಜತೆಗೆ ಗ್ರಾಹಕರ ಅನುಕೂಲಕ್ಕಾಗಿ ತಕ್ಕಂತೆ ಇಎಂಐ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಸುಲಭ ಕಂತುಗಳ ಮೂಲಕ ಹಣ ಪಾವತಿ ಮಾಡಲು ಸಹಕಾರಿಯಾಗಲಿದೆ.
ಉಚಿತವಾಗಿ ಮನೆ ಬಾಗಿಲಿಗೆ
ಮೇಳದಲ್ಲಿ ಆಯೋಜಿಸಿರುವ ಎಲ್ಲಾ ವರ್ತಕರು ತಮ್ಮಲ್ಲಿ ಖರೀದಿ ಮಾಡಿದ ಪೀಠೋಪಕರಣಗಳನ್ನು ಬೆಂಗಳೂರು ನಗರದ ಯಾವುದೇ ಪ್ರದೇಶಗಳಿಗೆ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಹಾಗಾಗಿ ಇಲ್ಲಿ ಖರೀದಿ ಮಾಡಿದ ಪೀಠೋಪಕರಣಗಳನ್ನು ಮನೆಗೆ ಸಾಗಿಸಲು ತೊಂದರೆಯಾಗುವುದಿಲ್ಲ.
