ಇಂದಿನಿಂದ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿನಿತ್ಯ ಬದಲಾಗಲಿವೆ. ಇಂದಿನ ಇಂಧನ ದರವನ್ನು ಗೊತ್ತುಮಾಡಿಕೊಳ್ಳುವುದು ಹೇಗೆ ಎಂದು ಎಲ್ಲಾ ವಾಹನ ಸವಾರರ ಮುಂದಿರುವ ಸಾಮನ್ಯ ಪ್ರಶ್ನೆ. ಇಲ್ಲಿದೆ ವಿವರ

ಇಂದಿನಿಂದ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿನಿತ್ಯ ಬದಲಾಗಲಿವೆ. ಇಂದಿನ ಇಂಧನ ದರವನ್ನು ಗೊತ್ತುಮಾಡಿಕೊಳ್ಳುವುದು ಹೇಗೆ ಎಂದು ಎಲ್ಲಾ ವಾಹನ ಸವಾರರ ಮುಂದಿರುವ ಸಾಮನ್ಯ ಪ್ರಶ್ನೆ.

ಈ ನಿಟ್ಟಿನಲ್ಲಿ ಗ್ರಾಹಕರಿಗೆ ಅನುಕೂಲವಾಗಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ವಿವಿದ ರಿತಿಯ ಸೌಲಭ್ಯಗಳನ್ನು ಆರಂಭಿಸಿದೆ. ಪೆಟ್ರೋಲ್ ಬಂಕ್’ಗಳಲ್ಲಿ ಎಲ್’ಈಡಿ ಸ್ಕ್ರೀನ್’ಗಳು, ಟೋಲ್-ಫ್ರೀ ನಂ, ಸೊಶಿಯಲ್ ಮೀಡಿಯಾ ಪೋಸ್ಟ್’ಗಳು, ಎಸ್’ಎಮ್’ಎಸ್ ಹಾಗೂ ಮೊಬೈಲ್ ಅಪ್ಲಿಕೇಶನ್’ಗಳ ಮೂಲಕ ಪ್ರತಿದಿನ ಪರಿಷ್ಕೃತ ದರಗಳನ್ನು ಅದು ಪ್ರಕಟಿಸಲಿದೆ. ಜತೆಗೆ ಪ್ರತಿಯೊಂದು ಪೆಟ್ರೋಲ್ ಬಂಕ್’ಗಳ ಮುಂದೆ ಅದರ ಡೀಲರ್ ಕೋಡನ್ನು ಕೂಡಾ ಪ್ರದರ್ಶಿಸಲಾಗುವುದು, ಆ ಕೋಡ್ ಮೂಲಕ ಎಸ್’ಎಂ’ಎಸ್ ಮೂಲಕ ದರವನ್ನು ತಿಳಿದುಕೋಳ್ಳಬಹುದಾಗಿದೆ.

ತಾಂತ್ರಿಕ ಸಮಸ್ಯೆಗಳನ್ನು ನಿರ್ವಹಿಸಲು ಐಓಸಿಯು ದೇಶಾದ್ಯಂತ 87 ಕಂಟ್ರೋಲ್ ರೂಂಗಳನ್ನು ಕೂಡಾ ಆರಂಭಿಸಿದೆ. ಡೀಲರ್’ಗಳಿಗೆ ಆ ದಿನದ ದರಗಳನ್ನು ತಿಳಿಸಲು ನಾಲ್ಕು ರೀತಿಯ ವ್ಯವಸ್ತೆಗಳನ್ನು ಮಾಡಲಾಗಿದೆ. ಕಸ್ಟಮೈಸ್’ಡ್ ಎಸ್’ಎಂ’ಎಸ್, ಈ-ಮೈಲ್ಸ್, ಮೊಬೈಲ್ ಅಪ್ಲಿಕೆಶನ್ ಹಾಗೂ ವೆಬ್ ಪೋರ್ಟಲ್ ಮೂಲಕ ಅಂದಿನ ದರಗಳನ್ನು ಡೀಲರ್’ಗಳು ತಿಳಿದುಕೊಳ್ಳಬಹುದಾಗಿದೆ.

ಅನ್’ಲೈನ್ ದರ ಕಂಡುಕೊಳ್ಳಬೇಕಾದರೆ:

ಇಂಡಿಯನ್ ಆಯಿಲ್ ವೆಬ್’ಸೈಟ್’ಗೆ ಭೇಟಿ ನೀಡಿ

‘RO Locator’ ಆಯ್ಕೆಯನ್ನು ಬಳಸಿ ನಿಮ್ ಹತ್ತಿರದ ಪೆಟ್ರೋಲ್ ಬಂಕನ್ನು ಕಂಡುಕೊಳ್ಳಿ

ನಿಮಗೆ ಅಂದಿನ ದರ ಡಿಸ್ಪ್ಲೇ ಆಗುವುದು

SMS ಮೂಲಕ:

 ಈ ಮಾದರಿಯಲ್ಲಿ ಮೆಸೇಜ್ ಟೈಪಿಸಿ

SMS RSP <ಸ್ಪೇಸ್> ಡೀಲರ್ ಕೋಡ್ (ಡೀಲರ್ ಕೋಡ್ ಪೆಟ್ರೋಲ್ ಬಂಕ್ ಹೊರಗಡೆ ಹಾಕಲಾಗುವುದು)

ಈ ಮೊಬೈಲ್ ಸಂಖ್ಯೆಗೆ ಕಳುಹಿಸಿ- 92249 92249

ಆ್ಯಪ್‌ ಮೂಲಕ ಚೆಕ್:

ಇಂಡಿಯನ್ ಆಯಿಲ್ ಕಾರ್ಪೊರೇಶನ್ Fuel@IOC - IndianOil ಎಂಬ ಆ್ಯಪ್‌ ಡೌನ್’ಲೋಡ್ ಮಾಡಿಕೊಳ್ಳಿ. ಅದು ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ಲ್ ಸ್ಟೋರ್’ನಲ್ಲಿ ಲಭ್ಯವಿದೆ.

ದೂರುಗಳಿಗೆ ಟೋಲ್ ಫ್ರೀ ನಂ:

ಪ್ರತಿದಿನದ ದರಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದರೆ 1800 2333 555 ನಂ.ಗೆ ಕರೆ ಮಾಡಿ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ.