ಪೆಟ್ರೋಲ್​ ದರ ಲೀಟರ್‌ಗೆ 42 ಪೈಸೆ ಮತ್ತು ಡೀಸೆಲ್‌ ದರ  1ರೂಪಾಯಿ 03 ಪೈಸೆಯಷ್ಟು ಏರಿಕೆಯಾಗಿದೆ.

ನವದೆಹಲಿ (ಜ.16): ವಾಹನ ಸವಾರರಿಗೆ ಮತ್ತೊಮ್ಮೆ ಶಾಕಿಂಗ್ ನ್ಯೂಸ್. ಹೊಸ ವರ್ಷದಲ್ಲಿ ಸತತ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗಿದೆ.

ವರ್ಷದ ಮೊದಲ ದಿನವೇ ಏರಿಕೆ ಕಂಡಿದ್ದ ಪೆಟ್ರೋಲ್​ ಡೀಸೆಲ್​ ದರ ಮತ್ತೆ ನಿನ್ನೆ ಮಧ್ಯರಾತ್ರಿಯಿಂದ ಏರಿಕೆಯಾಗಿದೆ .

ಪೆಟ್ರೋಲ್​ ದರ ಲೀಟರ್‌ಗೆ 42 ಪೈಸೆ ಮತ್ತು ಡೀಸೆಲ್‌ ದರ 1ರೂಪಾಯಿ 03 ಪೈಸೆಯಷ್ಟು ಏರಿಕೆಯಾಗಿದೆ.

ನಿನ್ನೆ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ನವೆಂಬರ್​ ಹಾಗೂ ಡಿಸೆಂಬರ್​'ನಿಂದ ಸತತವಾಗಿ ನಾಲ್ಕನೇ ಬಾರಿ ಪೆಟ್ರೋಲ್​ ಬೆಲೆ ಹೆಚ್ಚಾಗಿದ್ದು , ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್​ ಬೆಲೆಗಳ ಏರಿಕೆಯೇ ಪದೇ ಪದೇ ಪೆಟ್ರೋಲ್​ ಡೀಸೆಲ್​ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.