ಇದರಿಂದ ಆರೋಗ್ಯಕ್ಕೆ ಅಪಾಯ ಸಂಭವಿಸಬಹುದು ಎಂದು ಎಫ್‌ಎಸ್‌ಎಸ್‌ಎಐ ತನ್ನ ಆದೇಶದಲ್ಲಿ ತಿಳಿಸಿದೆ.

ನವದೆಹಲಿ(ಜು.27): ಸ್ಟೆಪ್ಲರ್ ಪಿನ್‌ಗಳನ್ನು ಹಾಕಿರುವ ಟೀ ಬ್ಯಾಗ್‌ಗಳನ್ನು 2018ರ ಜ.1ರಿಂದ ನಿಷೇಧಿಸಲಾಗುವುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸಿದೆ. ಒಂದು ವೇಳೆ ಪಿನ್ ಕಳಚಿ ಹೋಗಿದ್ದರೆ ಅದು ಟೀ ಜೊತೆ ಪರೋಕ್ಷವಾಗಿ ದೇಹ ಸೇರುವ ಸಾಧ್ಯತೆ ಇದೆ. ಇದರಿಂದ ಆರೋಗ್ಯಕ್ಕೆ ಅಪಾಯ ಸಂಭವಿಸಬಹುದು ಎಂದು ಎಫ್‌ಎಸ್‌ಎಸ್‌ಎಐ ತನ್ನ ಆದೇಶದಲ್ಲಿ ತಿಳಿಸಿದೆ. 2018ರ ಜ.1ರಿಂದ ಸ್ಟೆಪ್ಲರ್ ಹಾಕಿದ ಟೀ ಬ್ಯಾಗುಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಆಮದನ್ನು ನಿಲ್ಲಿಸುವಂತೆ ವ್ಯಾಪಾರಸ್ಥರಿಗೆ ಎಫ್‌ಎಸ್‌ಎಸ್‌ಎಐ ಸೂಚಿಸಿದೆ.