ಉನ್ನತ ಹುದ್ದೆಗಳು, ಉನ್ನತ ಕಚೇರಿಗಳು, ಮೊಬೈಲ್‌ ಬ್ರಾಂಡ್‌ಗಳು ಮತ್ತು ವಸ್ತುಗಳು ರಾಜಸ್ಥಾನದ ಬುಂದಿ ಜಿಲ್ಲೆಯ ಕೆಲವು ಗ್ರಾಮಗಳ ಗ್ರಾಮಸ್ಥರ ಹೆಸರು​ ಗಳಾಗಿರುವುದು ಇಲ್ಲಿ ಸಾಮಾನ್ಯ. ರಾಷ್ಟ್ರ​ಪತಿ, ಪ್ರಧಾನ ಮಂತ್ರಿ, ಸ್ಯಾಮ್‌ಸಂಗ್‌ ಮತ್ತು ಆ್ಯಂಡ್ರಾಯ್ಡ್‌ ಮುಂತಾದ ಹೆಸರು​ಗಳು ಮಾತ್ರವಲ್ಲದೆ, ಸಿಮ್‌ಕಾರ್ಡ್‌, ಚಿಪ್‌, ಜಿಯೋನಿ, ಮಿಸ್‌ಕಾಲ್‌, ರಾಜ್ಯಪಾಲ, ಹೈಕೋರ್ಟ್‌ ಮುಂತಾದ ವಿಶಿಷ್ಟಹೆಸರುಗಳು ಈ ಗ್ರಾಮಸ್ಥರಲ್ಲಿದೆ.

ಬುಂದಿ(ರಾಜಸ್ಥಾನ) : ರಾಷ್ಟ್ರಪತಿ ಮೇಕೆ ಕಾಯಲು ಹೋಗಿದ್ದಾನೆ, ಪ್ರಧಾನ ಮಂತ್ರಿ ಅಗತ್ಯ ವಸ್ತು ಖರೀದಿಸಲು ನಗರಕ್ಕೆ ತೆರಳಿದ್ದಾನೆ ಎಂದು ಯಾರದರೂ ಹೇಳಿದರೆ ಇಲ್ಲಿ ಅಚ್ಚರಿ ಪಡಬೇಕಾಗಿಲ್ಲ. ವೈದ್ಯರು ಸ್ಯಾಮ್‌ಸಂಗ್‌, ಆ್ಯಂಡ್ರಾಯ್ಡ್‌ಗೆ ಭೇದಿಗೆ ಔಷಧಿ ಕೊಟ್ಟಿದ್ದಾರೆ ಎಂದರೂ ನಂಬಲೇ​ಬೇಕು. ರಾಜಸ್ಥಾನದ ಬುಂದಿ ಜಿಲ್ಲೆಯ ರಾಮ​ನಗರ ಎಂಬ ಗ್ರಾಮದ ಕಂಜಾರ ಸಮು​ದಾಯದಲ್ಲಿ ಪ್ರತಿ ಮನೆಯಲ್ಲೂ ಇಂ​ಥದ್ದೇ ವಿಚಿತ್ರ ಹೆಸರುಗಳು ಕೇಳಿಬರುತ್ತವೆ.
ಉನ್ನತ ಹುದ್ದೆಗಳು, ಉನ್ನತ ಕಚೇರಿಗಳು, ಮೊಬೈಲ್‌ ಬ್ರಾಂಡ್‌ಗಳು ಮತ್ತು ವಸ್ತುಗಳು ರಾಜಸ್ಥಾನದ ಬುಂದಿ ಜಿಲ್ಲೆಯ ಕೆಲವು ಗ್ರಾಮಗಳ ಗ್ರಾಮಸ್ಥರ ಹೆಸರು​ ಗಳಾಗಿರುವುದು ಇಲ್ಲಿ ಸಾಮಾನ್ಯ. ರಾಷ್ಟ್ರ​ಪತಿ, ಪ್ರಧಾನ ಮಂತ್ರಿ, ಸ್ಯಾಮ್‌ಸಂಗ್‌ ಮತ್ತು ಆ್ಯಂಡ್ರಾಯ್ಡ್‌ ಮುಂತಾದ ಹೆಸರು​ಗಳು ಮಾತ್ರವಲ್ಲದೆ, ಸಿಮ್‌ಕಾರ್ಡ್‌, ಚಿಪ್‌, ಜಿಯೋನಿ, ಮಿಸ್‌ಕಾಲ್‌, ರಾಜ್ಯಪಾಲ, ಹೈಕೋರ್ಟ್‌ ಮುಂತಾದ ವಿಶಿಷ್ಟಹೆಸರುಗಳು ಈ ಗ್ರಾಮಸ್ಥರಲ್ಲಿದೆ.
ಗ್ರಾಮದ ಬಹುತೇಕರು ಅನಕ್ಷರಸ್ಥ​ ರಾಗಿದ್ದರೂ, ಅವರ ಹೆಸರುಗಳು ಬೇರೆ​ಯದ್ದೇ ಅರ್ಥವನ್ನು ನೀಡುತ್ತವೆ. ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಕಲೆಕ್ಟರ್‌ ಬಗ್ಗೆ ಮೆಚ್ಚುಗೆ ಹೊಂದಿದ್ದ ಮಹಿಳೆಯೊಬ್ಬರು ತಮ್ಮ ಮೊಮ್ಮಗನಿಗೆ ಕಲೆಕ್ಟರ್‌ ಎಂದು ನಾಮಕರಣ ಮಾಡಿದ್ದರು. ಇದೀಗ 50 ವರ್ಷವಾಗಿರುವ ಕಲೆಕ್ಟರ್‌ ಯಾವತ್ತೂ ಶಾಲೆ ಮೆಟ್ಟಿಲನ್ನೇ ಹತ್ತಿಲ್ಲ. 
ಪ್ರತಿಷ್ಠಿತ ಹುದ್ದೆಗಳಲ್ಲಿರುವ ವ್ಯಕ್ತಿಗಳಿಂದ ಪ್ರಭಾವಿತರಾಗಿ ಇಲ್ಲಿನ ಗ್ರಾಮಸ್ಥರು ಐಜಿ, ಎಸ್‌ಪಿ, ಹವಾಲ್ದಾರ್‌, ಮ್ಯಾಜಿಸ್ಪ್ರೇಟ್‌ ಎಂಬಂಥ ಹೆಸರುಗಳನ್ನೂ ನೀಡುತ್ತಿದ್ದಾರೆ. ಇಂದಿರಾ ಗಾಂಧಿ ಕುಟುಂಬದಿಂದ ಪ್ರಭಾವಿ​ತ​ನಾದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಸೋನಿಯಾ, ರಾಹುಲ್‌, ಪ್ರಿಯಾಂಕಾ ಎಂದು ಹೆಸರಿಟ್ಟಿದ್ದಾರೆ. ಜಿಲ್ಲೆಯ ನೈನ್ವಾ ಪ್ರಾಂತ್ಯದ ಮೊಗ್ಗಿಯಾ ಮತ್ತು ಬಂಜಾರಾ ಸಮುದಾಯದವರು ಮೊಬೈಲ್‌ ಬ್ರಾಂಡ್‌ಗಳ ಹೆಸರನ್ನು ಮಕ್ಕಳಿ​ಗಿಟ್ಟಿದ್ದಾರೆ. ಅರ್ಣಿಯಾ ಗ್ರಾಮದಲ್ಲಿ ಮೀನಾ ಸಮುದಾಯದ ಜನರು ತಮ್ಮ ಹೆಣ್ಣು ಮಕ್ಕಳಿಗೆ ಇನ್ನೂ ವಿಶಿಷ್ಟವಾಗಿ ನಮ್‌ಕೀನ್‌, ಫೋಟೊಬಾಯಿ, ಜಿಲೇಬಿ, ಮಿಠಾಯಿ, ಫಾಲ್ತು ಹೆಸರಿಟ್ಟಿದ್ದಾರೆ.