ಅವರೆಲ್ಲರೂ ಜೀವದ ಗೆಳೆಯರು. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಮಟ್ಟಿಗೆ ಅನ್ಯೋನ್ಯವಾಗಿದ್ದರು. ಮೋಜು ಮಸ್ತಿಗೆ ಅಂತ ಹೋದೋರು ಮನೆಗೆ ವಾಪಾಸ್ ಬರಲೇ ಇಲ್ಲ. ಮಾರ್ಗ ಮಧ್ಯೆಯೇ ಬಾರದ ಲೋಕಕ್ಕೆ ತೆರಳಿದ್ದಾರೆ. ಇಲ್ಲಿದೆ ನೋಡಿ ಜೀವದ ಗೆಳೆಯರ ದುರಂತದ ಸ್ಟೋರಿ.
ಬೆಂಗಳೂರು(ಜು.12): ಅವರೆಲ್ಲರೂ ಜೀವದ ಗೆಳೆಯರು. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಮಟ್ಟಿಗೆ ಅನ್ಯೋನ್ಯವಾಗಿದ್ದರು. ಮೋಜು ಮಸ್ತಿಗೆ ಅಂತ ಹೋದೋರು ಮನೆಗೆ ವಾಪಾಸ್ ಬರಲೇ ಇಲ್ಲ. ಮಾರ್ಗ ಮಧ್ಯೆಯೇ ಬಾರದ ಲೋಕಕ್ಕೆ ತೆರಳಿದ್ದಾರೆ. ಇಲ್ಲಿದೆ ನೋಡಿ ಜೀವದ ಗೆಳೆಯರ ದುರಂತದ ಸ್ಟೋರಿ.
ಬೆಂಗಳೂರಿನಿಂದ ಬರುತ್ತಿದ್ದ ಕ್ಯಾಂಟರ್ ಹಾಗೂ ಕನಕಪುರ ಮಾರ್ಗದಿಂದ ಹೊರಟಿದ್ದ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಐವರು ಯುವಕರು ಸಾವಿಗೀಡಾದ್ದಾರೆ. ರಾಜು, ಚಂದ್ರು, ಅನಿಲ್ ಕುಮಾರ್, ಸಂತೋಷ್ ಹಾಗೂ ಮತ್ತೊಬ್ಬ ಅಪಘಾತದಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ನಿನ್ನೆ ಕನಕಪುರ ತಾಲ್ಲೂಕಿನ ಕಬ್ಬಾಳು ದೇವಾಲಯಕ್ಕೆ ಬೆಂಗಳೂರಿನ ಐವರೂ ಫ್ರೆಂಡ್ಸ್ ಹೋಗಿದ್ದಾರೆ. ಪೂಜೆ ಬಳಿಕ ಮೋಜು ಮಸ್ತಿ ಮುಗಿಸಿ ವಾಪಾಸ್ ಬೆಂಗಳೂರಿಗೆ ಬರ್ತಿದ್ದಾಗ ಅತೀವೇಗದಲ್ಲಿದ್ದ ಕಾರು ಹಾಗೂ ಕ್ಯಾಂಟರ್ ಎರಡೂ ಮುಖಾಮುಖಿ ಡಿಕ್ಕಿಯಾಗಿವೆ.
ಒಟ್ಟಿನಲ್ಲಿ ಜೀವದ ಗೆಳೆಯರಾಗಿದ್ದ ಐವರು ಕೂಡ ಸಾವಿಗೀಡಾಗಿದ್ದಾರೆ. ಅತೀವೇಗದ ಚಾಲನೆಯಿಂದ ತಮ್ಮ ಜೀವವನ್ನ ಕಳೆದುಕೊಂಡು ಹೆತ್ತವರನ್ನ ನಡುದಾರಿಯಲ್ಲಿ ಬಿಟ್ಟು ಹೋಗಿದ್ದಾರೆ.
