ಪಾರ್ಕ್ನಲ್ಲಿ ಸಿಗರೆಟ್‌ ಚೂರುಗಳು, ಪ್ಲಾಸ್ಟಿಕ್‌ ಕಸವನ್ನು ಹೆಕ್ಕಿ ತಂದು ಕಸದಬುಟ್ಟಿಗೆ ಹಾಕಲು 6 ಕಾಗೆಗಳಿಗೆ ತರಬೇತಿ ನೀಡಲಾಗಿದೆ. 

ಅರ್ಧ ನೀರು ತುಂಬಿದ ಹೂಜಿಯಲ್ಲಿ ಕಲ್ಲು ತುಂಬಿ ಕಾಗೆ ನೀರು ಕುಡಿದ ಕತೆಯನ್ನು ನೀವೆಲ್ಲಾ ಕೇಳಿರುತ್ತೀರಿ.

 ಅದೇ ರೀತಿ ಫ್ರಾನ್ಸ್‌ನ ಥೀಮ್‌ ಪಾರ್ಕ್ನಲ್ಲಿ ಸಿಗರೆಟ್‌ ಚೂರುಗಳು, ಪ್ಲಾಸ್ಟಿಕ್‌ ಕಸವನ್ನು ಹೆಕ್ಕಿ ತಂದು ಕಸದಬುಟ್ಟಿಗೆ ಹಾಕಲು 6 ಕಾಗೆಗಳಿಗೆ ತರಬೇತಿ ನೀಡಲಾಗಿದೆ. 

ಅವು ಪಾರ್ಕಿನಲ್ಲಿ ಹಾರಾಡಿ ಕಸವನ್ನು ತಂದು ಕಸದಬುಟ್ಟಿಗೆ ಹಾಕುತ್ತಿವೆ. ಪ್ರತಿಬಾರಿ ಕಾಗೆಗಳು ಪಾರ್ಕ್ನಲ್ಲಿ ಬಿದ್ದ ಕಸವನ್ನು ಹೆಕ್ಕಿತಂದು ಬಿಟ್ಟಿಗೆ ಹಾಕಿದಾಗೆಲ್ಲಾ ಆಹಾರದ ಬಾಕ್ಸ್‌ ತೆರೆಕೊಳ್ಳುತ್ತದೆ. 

ಹೀಗೆ ಆಹಾರದ ಆಸೆಗೆ ಕಾಗೆ ಪಾರ್ಕ್ನಲ್ಲಿ ಒಂದು ಕಸವನ್ನು ಬಿಡದೇ ಹೆಕ್ಕಿತಂದು ಕಸದಬುಟ್ಟಿಗೆ ಹಾಕುತ್ತಿದೆ. ಈ ಉಪಾಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಜನರು ಕಾಗೆ ಒಂದು ಬುದ್ಧಿವಂತ ಪಕ್ಷಿ ಎಂದು ಮಾತಾಡಿಕೊಳ್ಳುತ್ತಿದ್ದಾರೆ.