ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀಮಿಯಮ್ ಟ್ರೈನ್`ಗಳಲ್ಲಿ ಉಚಿತ ವೈಫೈ ವ್ಯವಸ್ಥೆಯನ್ನ ರೈಲ್ವೆ ಇಲಾಖೆ ಕಲ್ಪಿಸಿತ್ತು. ಆದರೆ, ಇದರಲ್ಲಿ ಬಹುತೇಕ ವೈಫೈ ಅನ್ನ ಪೋರ್ನ್ ವೀಕ್ಷಣೆಗೇ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಪಾಟ್ನಾ(ಅ.23): ಟೆಕ್ನಾಲಜಿಯನ್ನ ಸದ್ಬಳಕೆ ಮಾಡುವವರಿಗಿಂತ ದುರ್ಬಳಕೆ ಮಾಡುವವರೇ ಹೆಚ್ಚು.ಇದಕ್ಕೆ ಸಾಕ್ಷಿ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ನೀಡಲಾಗಿರುವ ಫ್ರೀ ವೈಫೈ ವ್ಯವಸ್ಥೆ. ಹೌದು, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀಮಿಯಮ್ ಟ್ರೈನ್`ಗಳಲ್ಲಿ ಉಚಿತ ವೈಫೈ ವ್ಯವಸ್ಥೆಯನ್ನ ರೈಲ್ವೆ ಇಲಾಖೆ ಕಲ್ಪಿಸಿತ್ತು. ಆದರೆ, ಇದರಲ್ಲಿ ಬಹುತೇಕ ವೈಫೈ ಅನ್ನ ಪೋರ್ನ್ ವೀಕ್ಷಣೆಗೇ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದರಿಂದಾಗಿ ರೈಲ್ವೆ ಇಲಾಖೆ ನಿಗದಿಪಡಿಸಿದ್ದಕ್ಕಿಂತ ಹೈ ಡೇಟಾ ಬಳಕೆಯಾಗಿ ರೈಲ್ವೆ ಇಲಾಖೆಗೆ ೊಂದೂವರೆ ಪಟ್ಟು ನಷ್ಟ ಸಂಭವಿಸಿದೆ. ಜೊತೆಗೆ ಪ್ರಯಾಣಿಕರು ಎಗ್ಗುಸಿಗ್ಗಿಲ್ಲದೆ ರೈಲ್ವೆ ನಿಲ್ದಾಣಗಳಲ್ಲೇ ಪೋರ್ನ್ ವೀಕ್ಷಣೆಗೆ ಇಳಿದಿದ್ದರಿಂದ ಪ್ರಯಾಣಿಕರಿಗೂ ಇರಿಸು ಮುರಿಸು ಉಂಟಾಗಿದೆ. ಇದರಿಂದಾಗಿ ಪಾಟ್ನಾದ 29 ರೈಲ್ವೆನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ರದ್ದು ಮಾಡಲಾಗಿದೆ.