ರೈತರಿಗೆ ಸಾಲ,ಕಡಿಮೆ ದರದಲ್ಲಿ ವಿದ್ಯುತ್, ಬೆಳೆಗಳಿಗೆ ಬೆಂಬಲ ಬೆಲೆ, ಸರ್ಕಾರಿ ಉದ್ಯೋಗದಲ್ಲಿ  ಮಹಿಳೆಯರಿಗೆ ಶೇ.33 ಮೀಸಲಾತಿ,ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಶೇ.50 ಮೀಸಲಾತಿ

ಲಖನೌ(ಫೆ.11): ಯುವಕರಿಗೆ ಉಚಿತ ಸ್ಮಾರ್ಟ್ ಫೋನ್'ಗಳು, ಬಡವರಿಗೆ ತಿಂಗಳಿಗೆ ಒಂದು ಸಾವಿರ ನಗದು, 20 ಲಕ್ಷ ಯುವ ಜನತೆಗೆ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಉದ್ಯೋಗ ಖಾತರಿ ಇದನೆಲ್ಲ ನೀಡುತ್ತಿರುವುದು ಮತ್ಯಾರು ಅಲ್ಲ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.

ಇವೆಲ್ಲವನ್ನು ಸುಮ್ಮನೆ ನೀಡುವುದಿಲ್ಲಉತ್ತರ ಪ್ರದೇಶದ ಜನತೆ ಎಸ್'ಪಿಯನ್ನು ಭಾರಿ ಬಹುಮತದಿಂದ ಗೆಲ್ಲಿಸಬೇಕು. ಅಂದರೆ 403 ಸೀಟುಗಳಲ್ಲಿ 300 ಕ್ಷೇತ್ರಗಳಲ್ಲಿಗೆಲ್ಲಿಸಿಕೊಟ್ಟರೆ ಮೇಲಿನ ಯೋಜನೆಗಳ ಜೊತೆ ರೈತರಿಗೆ ಸಾಲ,ಕಡಿಮೆ ದರದಲ್ಲಿ ವಿದ್ಯುತ್, ಬೆಳೆಗಳಿಗೆ ಬೆಂಬಲ ಬೆಲೆ, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ,ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಶೇ.50 ಮೀಸಲಾತಿ, 5 ವರ್ಷದಲ್ಲಿ ವಿದ್ಯುತ್, ರಸ್ತೆ ಹಾಗೂ ನೀರಾವರಿ ವ್ಯವಸ್ಥೆ, 10 ಲಕ್ಷ ಬಡ ದಲಿತ ಹಾಗೂ ಹಿಂದುಳಿದ ಕುಟುಂಬಗಳಿಗೆ ಉಚಿತ ಗೃಹ ನಿರ್ಮಾಣ ಇದು ಎಸ್'ಪಿ ಹಾಗೂ ಕಾಂಗ್ರೆಸ್'ನ ಚುನಾವಣಾ ಪ್ರಣಾಳಿಕೆಗಳು.

ಮಾರ್ಚ್ 11 ರ ಚುನಾವಣಾ ಫಲಿತಾಂಶದ ನಂತರ ಎಸ್'ಪಿ ವಿಜಯ ಮಾಲೆ ಧರಿಸಿದರೆ ಉತ್ತರ ಪ್ರದೇಶ ಜನತೆ ಮೇಲಿನ ಯೋಜನೆಗಳ ಬಗ್ಗೆ ಕನಸು ಕಾಣಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred