Asianet Suvarna News Asianet Suvarna News

ಉಚಿತ ಅಕ್ಕಿಯಿಂದ ಜನಕ್ಕೆ ಸೋಮಾರಿತನ!

ಅಕ್ಕಿ ಹಾಗೂ ದಿನಸಿ ಪದಾರ್ಥಗಳಂತಹ ಮೂಲಭೂತ ಸೌಲಭ್ಯಗಳನ್ನು ಬಡ ಜನರಿಗೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಸೌಲಭ್ಯವನ್ನು ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಎಲ್ಲ ಜನರಿಗೂ ವಿಸ್ತರಣೆ ಮಾಡಿವೆ. ಇದರ ಪರಿಣಾಮವಾಗಿ ಜನರು ಎಲ್ಲವನ್ನೂ ಸರ್ಕಾರದಿಂದ ಉಚಿತವಾಗಿ ಬಯಸುತ್ತಾರೆ. ಅಲ್ಲದೆ ಸೋಮಾರಿಗಳಾಗಿದ್ದಾರೆ- ಮದ್ರಾಸ್‌ ಹೈಕೋರ್ಟ್‌

Free Rice Has Made Tamil Nadu people Very Lazy Says Madras High Court
Author
Chennai, First Published Nov 24, 2018, 11:55 AM IST

ಚೆನ್ನೈ[ನ.24]: ಪಡಿತರ ವ್ಯವಸ್ಥೆಯಡಿ ನೀಡಲಾಗುವ ಉಚಿತ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್‌) ಮಾತ್ರ ಸೀಮಿತಗೊಳಿಸಬೇಕು. ಸಮಾಜದ ಎಲ್ಲ ವರ್ಗದ ಜನರಿಗೂ ಈ ರೀತಿ ಉಚಿತ ಕೊಡುಗೆ ನೀಡುತ್ತಿರುವುದರಿಂದ ಜನರು ಸೋಮಾರಿಗಳಾಗಿದ್ದಾರೆ ಎಂದು ಮದ್ರಾಸ್‌ ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: 18 ಶಾಸಕರ ಅನರ್ಹತೆ: ಸ್ಪೀಕರ್ ತೀರ್ಪು ಸರಿ ಎಂದ ಹೈಕೋರ್ಟ್!

ಅಕ್ಕಿ ಹಾಗೂ ದಿನಸಿ ಪದಾರ್ಥಗಳಂತಹ ಮೂಲಭೂತ ಸೌಲಭ್ಯಗಳನ್ನು ಬಡ ಜನರಿಗೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಸೌಲಭ್ಯವನ್ನು ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಎಲ್ಲ ಜನರಿಗೂ ವಿಸ್ತರಣೆ ಮಾಡಿವೆ. ಇದರ ಪರಿಣಾಮವಾಗಿ ಜನರು ಎಲ್ಲವನ್ನೂ ಸರ್ಕಾರದಿಂದ ಉಚಿತವಾಗಿ ಬಯಸುತ್ತಾರೆ. ಅಲ್ಲದೆ ಸೋಮಾರಿಗಳಾಗಿದ್ದಾರೆ. ಸಣ್ಣಪುಟ್ಟಕೆಲಸಕ್ಕೂ ವಲಸಿಗ ನೌಕರರನ್ನು ಕರೆತರುತ್ತಿದ್ದಾರೆ ಎಂದು ನ್ಯಾ. ಕಿರುಬಾಕರನ್‌ ಹಾಗೂ ಅಬ್ದುಲ್‌ ಖುದ್ದೋಸ್‌ ದ್ವಿಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಟೋಲ್‌ಗಳಲ್ಲಿ ಹೊಸ ನಿಯಮ : ಹೈಕೋರ್ಟ್‌ ಆದೇಶ

ಪಡಿತರ ಅಕ್ಕಿಯನ್ನು ಕಳ್ಳ ಸಾಗಣೆ ಮಾಡಿ ಮಾರಾಟ ಮಾಡಿದ ವ್ಯಕ್ತಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ, ಆರ್ಥಿಕ ಹಿನ್ನೆಲೆ ನೋಡದೆ ಎಲ್ಲ ಪಡಿತರದಾರರಿಗೂ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಇದಕ್ಕಾಗಿ 2017-18ನೇ ಸಾಲಿನಲ್ಲಿ 2110 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಹೇಳಿತು. ಆಗ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Follow Us:
Download App:
  • android
  • ios