Asianet Suvarna News Asianet Suvarna News

ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಲ್ಯಾಪ್'ಟಾಪ್

ಒಟ್ಟು 300 ಕೋಟಿ ರೂ. ವೆಚ್ಚದಡಿ, 1.5 ಲಕ್ಷ ವಿದ್ಯಾರ್ಥಿಗಳಿಗೆ ಉತ್ತಮ ದರ್ಜೆಯ ಲ್ಯಾಪ್ ಟಾಪ್ ಒದಗಿಸಲಾಗುವುದು.

Free Laptop For Graduation Poor Students

ಬೆಂಗಳೂರು(ಆ.09): ರಾಜ್ಯ ಸರ್ಕಾರ ಎಲ್ಲಾ ಜಾತಿ ವರ್ಗಗಳ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲು ತಿರ್ಮಾನಿಸಿದೆ. ಆದರೆ ಕುಟುಂಬದ ವಾರ್ಷಿಕ ಆದಾಯ ಮಿತಿ 2.5 ಲಕ್ಷ ರೂ. ದಾಟಿರಬಾರದು ಎಂದು ಉನ್ನತ ಶಿಕ್ಷಣ ಸಚಿವ ಬಸವಾರಾಜ್ ರಾಯರೆಡ್ಡಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು ಎಲ್ಲಾ ಜಾತಿಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ನೀಡ್ತಿವೆ. ಒಟ್ಟು 300 ಕೋಟಿ ರೂ. ವೆಚ್ಚದಡಿ, 1.5 ಲಕ್ಷ ವಿದ್ಯಾರ್ಥಿಗಳಿಗೆ ಉತ್ತಮ ದರ್ಜೆಯ ಲ್ಯಾಪ್ ಟಾಪ್ ಒದಗಿಸಲಾಗುವುದು.ಈ ಬಗ್ಗೆ   ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಅಂಬೇಡ್ಕರ್ ಸ್ಕೂಲ್ ಆಪ್ ಎಕ್ನಾಮಿಕ್ಸ್ ಈ ವರ್ಷದಿಂದಲೇ ಆರಂಭವಾಗಲಿದ್ದು, ಪ್ರಥಮ ಕ್ಲಾಸ್‌ನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

Follow Us:
Download App:
  • android
  • ios