ಹೌದು, ಮಧುಗಿರಿ ಮೂಲದ ಈ ಸ್ವಾಮಿಜಿಯ ಹೆಸರು ಕೃಪಾನಿಧಿ .ಹಲವಾರು ವರ್ಷಗಳಿಂದ ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನವನ್ನ ನಡೆಸಿಕೊಂಡು ಹೋಗ್ತಿದ್ದಾನೆ. ದೇವಸ್ಥಾನಕ್ಕೆ ಬರೋ ಭಕ್ತರಿಗೆ ವಿವಿಧ ಪೂಜೆಗಳನ್ನ ಮಾಡಿಸುವ ಈತ ನೋಟ್ ಬ್ಯಾನ್ ಆದ್ಮೇಲೆ ತನ್ನಲ್ಲಿನ ನಿಯತ್ತನ್ನ ಹೊರಹಾಕಿದ್ದಾನೆ. ಅವನ ಬ್ಲಾಕ್ ಅಂಡ್ ವೈಟ್ ದಂಧೆಯ ಕರಾಮತ್ತು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೋಟ್ ಬ್ಯಾನ್ ಆದೇಶ ಬಂದ ಮೇಲೆ ಅದೆಷ್ಟೋ ಭ್ರಷ್ಟರಿಗೆ ಪೆಟ್ಟು ಬಿದ್ದಿರೋದು ಗೊತ್ತೇ ಇದೆ. ಕೆಲವರು ತಮ್ಮ ವರಮಾನ ತೋರಿಸಿ ತಮ್ಮಲ್ಲಿದ್ದ ಹಣ ಹೊಸ ನೋಟಿಗೆ ಬದಲಿಸಿದ್ರೆ ಇನ್ನು ಕೆಲವರು ಕಾಳ ಧನಿಕರ ಸಹಾಯದಿಂದ ಬ್ಲಾಕ್ ಮನಿಯನ್ನ ವೈಟ್ ಮಾಡಿಕೊಂಡಿದ್ರು. ಹೀಗೆ ಬ್ಲಾಕ್ ಆಂಡ್ ವೈಟ್ ದಂಧೆಗೆ ಕಾಳಧನಿಕನ ರೂಪದಲ್ಲಿ ಮತ್ತೊಬ್ಬ ಸ್ವಾಮಿ ಕೂಡ ಸಿಕ್ಕಿಬಿದ್ದಿದ್ದಾನೆ. ಈತನಿಗೆ ಭಕ್ತರ ಭಕ್ತಿಯೇ ಬಂಡವಾಳ...!
ಸಕಲವನ್ನೂ ತೊರೆದವನು ಸನ್ಯಾಸಿ ಅನ್ನೋ ಮಾತಿದೆ. ಆತನ ಸ್ಥಾನಕ್ಕೆ ಒಂದು ಅರ್ಥ ಇದೆ. ಆತ ಪೀಠವನ್ನಲಂಕರಿಸಿದರೆ ಇಡೀ ಭಕ್ತ ಸಮೂಹವೇ ಆತನ ಪಾದಕ್ಕೆ ಎರಗುತ್ತೆ. ಅಂಥಾ ನಂಬಿಕೆ ನಮ್ಮ ಜನರಲ್ಲಿ ಮನೆ ಮಾಡಿದೆ. ಆದ್ರೆ, ಇಲ್ಲೊಬ್ಬ ಸ್ವಾಮೀಜಿ, ಮೇಲ್ನೋಟಕ್ಕೆ ಸಾಚಾನಂತೆ ವರ್ತಿಸಿದರೂ ಈತನ ಅಸಲಿ ದಂಧೆನೇ ಬೇರೆ. ಸುಮಾರು 50 ವರ್ಷ ಇತಿಹಾಸವಿರೋ ಕಗ್ಗದಾಸಪುರದ ಆಂಜನೇಯ ದೇವಸ್ಥಾನದಲ್ಲಿ ಸ್ವಾಮಿಯಾಗಿರೋ ಈತ ನಡೆಸ್ತಾ ಇದ್ದಿದ್ದು ಬ್ಲಾಕ್ ಆಂಡ್ ವೈಟ್ ದಂಧೆ .
ಹೌದು, ಮಧುಗಿರಿ ಮೂಲದ ಈ ಸ್ವಾಮಿಜಿಯ ಹೆಸರು ಕೃಪಾನಿಧಿ .ಹಲವಾರು ವರ್ಷಗಳಿಂದ ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನವನ್ನ ನಡೆಸಿಕೊಂಡು ಹೋಗ್ತಿದ್ದಾನೆ. ದೇವಸ್ಥಾನಕ್ಕೆ ಬರೋ ಭಕ್ತರಿಗೆ ವಿವಿಧ ಪೂಜೆಗಳನ್ನ ಮಾಡಿಸುವ ಈತ ನೋಟ್ ಬ್ಯಾನ್ ಆದ್ಮೇಲೆ ತನ್ನಲ್ಲಿನ ನಿಯತ್ತನ್ನ ಹೊರಹಾಕಿದ್ದಾನೆ. ಅವನ ಬ್ಲಾಕ್ ಅಂಡ್ ವೈಟ್ ದಂಧೆಯ ಕರಾಮತ್ತು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
30 ರಿಂದ 35 ಪರ್ಸೆಂಟ್ ವ್ಯವಹಾರದ ಮಾತುಗಳನ್ನಾಡೋ ಈ ಭೂಪ, ದೇವಸ್ಥಾನ ಕಟ್ಟಬೇಕು ಅದಕ್ಕೆ ಈ ಕೆಲಸ ಮಾಡ್ತಾ ಇದೀನಿ ಅಂತಾನೆ. ಜೊತೆಗೆ, ಒಂದಷ್ಟು ನೋಟಿನ ಕಂತೆಗಳನ್ನ ಕೈಯಲ್ಲಿಡಿದು ಪೋಸ್ ಕೊಡ್ತಿರೋದನ್ನ ನೋಡಿದ್ರೆ, ಇವನು ಈ ದಂಧೆ ಮಾಡಿರೋದು ಕನ್ಪರ್ಮ್. ಯಾಕಂದ್ರೆ, ಇವನ ಕೈಯಲ್ಲಿರೋದು ಬರೀ ಎರಡು ಸಾವಿರ ರೂಪಾಯಿ ನೋಟಿನ ಹೊಸ ಕಂತೆಗಳು. ಪೂಜೆ ಮಾಡೋ ಈ ಸ್ವಾಮಿಜಿಗೆ ಅಷ್ಟೊಂದು ನೋಟುಗಳು ಎಲ್ಲಿ ಸಿಕ್ಕವು ಅನ್ನೋದೇ ಕೂತೂಹಲ...!
ಸ್ವಾಮೀಜಿಯ ಈ ದಂಧೆಯ ಬಗ್ಗೆ ಪ್ರಶ್ನಿಸಲು ಹೋದ ಸುವರ್ಣನ್ಯೂಸ್ಗೆ ಈ ಖತರ್ನಾಕ್ ಸ್ವಾಮಿ ನನಗೇನು ಗೋತ್ತೆಯಿಲ್ಲ ಅಂಥಾನೆ. ಜೊತೆಗೆ ನಾನಂಥ ಸ್ವಾಮೀಯೂ ಅಲ್ಲ ಅಂದುಬಿಡ್ತಾನೆ. ದೇವಸ್ಥಾನ ಕಟ್ಬೇಕು ಅನ್ನೋ ಆಸೆ ಇದ್ರೆ ಅದಕ್ಕೆ ಅದರದ್ದೇ ಆದಂತಹ ಆದಾಯ ಮೂಲಗಳಿವೆ. ದೋಚಿದ ದುಡ್ಡಲ್ಲಿ ದೇವಸ್ಥಾನ ಕಟ್ಟಿದ್ರೆ ಅದ್ಯಾವ ದೇವರು ಅಲ್ಲಿ ಕೂರ್ತಾನೋ ಆತನೇ ಬಲ್ಲ. ಸದ್ಯಕ್ಕೆ ಈತನ ಬ್ಲಾಕ್ ಆಂಡ್ ವೈಟ್ ದಂಧೆ ಅವ್ಯಾಹತವಾಗಿ ನಡೆದಿದೆ. ಭಕ್ತರ ಆಕ್ರೋಶ ಕಟ್ಟೆಯೊಡೆದೊಂದೇ ಬಾಕಿ.!
ವರದಿ: ಅಭಿಷೇಕ್ ಜೈಶಂಕರ್, ಸುವರ್ಣ ನ್ಯೂಸ್
