ಸಿದ್ದರಾಮಯ್ಯ ಆಪ್ತರಿಂದ ಕೋಟಿ ಕೋಟಿ ಲೂಟಿ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 2:14 PM IST
Fraud Case Against Siddaramaiah Close Aides
Highlights

ದೇವರ ಹೆಸರಿನಲ್ಲಿ ಕೋಟಿ ಕೋಟಿ ಮೌಲ್ಯದ ಹಣವನ್ನು ಲೂಟಿ ಮಾಡಿದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಿಂದಲೇ ಈ ಕೃತ್ಯ ನಡೆದಿದೆ. 

ಚಾಮರಾಜನಗರ :  ದೇವರ ಹೆಸರಿನಲ್ಲೂ ಕೋಟಿ ಕೋಟಿ  ಹಣ ಲೂಟಿ ಮಾಡಿದ ಆರೋಪವೊಂದು ಕೇಳಿ ಬಂದಿದೆ.  ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಿಂದ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಲೂಟಿ ನಡೆದಿದೆ ಎನ್ನಲಾಗಿದೆ.  

ಮಲೆ ಮಹಾದೇಶ್ವರ ದೇವಾಲಯದಲ್ಲಿ ಲೆಕ್ಕ ಅಧೀಕ್ಷಕನಾಗಿರುವ  ಎಂ ಬಸವರಾಜು ಹಾಗೂ ಮಹೇಶ್ ಕುಮಾರ್ ಎನ್ನುವ ಇಬ್ಬರ ವಿರುದ್ಧ ಕೋಟಿ ಕೋಟಿ ಹಣ ಲೂಟಿ ಮಾಡಿದ ಆರೋಪದಲ್ಲಿ ಎಸಿಬಿಗೆ ದೂರು ನಿಡಲಾಗಿದೆ. 

ಮಲೆ ಮಹದೇಶ್ವರ ದೇವಸ್ಥಾನದ ಪ್ರಾಧಿಕಾರದಲ್ಲಿ ಕೋಟಿಗಟ್ಟಲೇ ಅವ್ಯವಹಾರ ನಡೆಸಿದ್ದಾಗಿ ಬಿಜೆಪಿ ವಕ್ತಾರರಾದ ಎನ್.ಆರ್ ರಮೇಶ್ ದೂರು ಸಲ್ಲಿಸಿದ್ದಾರೆ.  

ಬಸ್ ಗಳ ನಿರ್ವಹಣೆ, ವಿದ್ಯುತ್ ನಿರ್ವಹಣೆ ಹಾಗೂ ಅನ್ನ ದಾಸೋಹ ದಲ್ಲಿ ಅವ್ಯವಹಾರ ನಡೆದಿದೆ. ದವಸ ಧಾನ್ಯಗಳ ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಲಾಗಿದೆ. 

loader