ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಡಳಿತ ವಿಭಾಗದಲ್ಲಿ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಜುಂಡಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ಸ್ವಂತ ಚಿಕ್ಕಪ್ಪನ ಹೆಸರಿನಲ್ಲಿದ್ದ ಜಮೀನಿನ ಪೋರ್ಜರಿ ಮಾಡಿ ತನ್ನ ತಾಯಿ ಹೆಸರಿಗೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು(ಜೂ.22): ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಡಳಿತ ವಿಭಾಗದಲ್ಲಿ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಜುಂಡಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ಸ್ವಂತ ಚಿಕ್ಕಪ್ಪನ ಹೆಸರಿನಲ್ಲಿದ್ದ ಜಮೀನಿನ ಪೋರ್ಜರಿ ಮಾಡಿ ತನ್ನ ತಾಯಿ ಹೆಸರಿಗೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮದ ಸರ್ವೆ ನಂಬರ್​ 572/6ರಲ್ಲಿರುವ 24 ಗುಂಟೆ ವಿಸ್ತೀರ್ಣದ ಜಮೀನು ಮೂಲತಃ ದುಂಡಮ್ಮ ಅನ್ನೋರಿಗೆ ದಾನದ ಮೂಲಕ ಬಂದಿತ್ತು. ಆದರೆ ಅವರ ಹೆಸರಿಗೆ ಖಾತೆ ಆಗಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಈ ಜಮೀನು ಐಜಿಪಿ ನಂಜುಂಡಸ್ವಾಮಿ ಅವರ ತಾಯಿ ಹೆಸರಿಗೆ ರಿಜಿಸ್ಟ್ರೇಷನ್ ಆಗಿದೆ. ಅಧಿಕಾರ ದುರ್ಬಳಕೆ ಮಾಡ್ಕೊಂಡು ನಂಜುಂಡಸ್ವಾಮಿ, ತಮ್ಮ ತಾಯಿ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನೂ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಸರೋಜಮ್ಮ ಹೆಸರಿಗೆ ಖಾತೆ ಮಾಡಿಕೊಡಿಬೇಡಿ ಅಂತಾ ಸರೋಜಮ್ಮ ಪತಿಯ ಸೋದರನ ಮಗ ತಹಶೀಲ್ದಾರ್'ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಕ್ಯಾರೆ ಎನ್ನದೇ ಮಳವಳ್ಳಿ ತಹಶೀಲ್ದಾರ್ ದಿನೇಶ್ ಚಂದ್ರ ಸರೋಜಮ್ಮ ಹೆಸರಿಗೆ ಎರಡೇ ದಿನದಲ್ಲಿ ಖಾತೆ ಮಾಡಿಕೊಟ್ಟಿದ್ದಾರೆ.

ಇನ್ನೂ ಇದೇ ಸರ್ವೆ ನಂಬರ್​'ನಲ್ಲಿನ ವಿಸ್ತೀರ್ಣದ ಚೆಕ್ಕು ಬಂದಿ ಸರಿಯಾಗಿದ್ದರೂ ಸರ್ವೆ ನಂಬರ್​'ನಲ್ಲಿ ತಪ್ಪಾಗಿದೆ. ಅಲ್ದೇ ವಂಶವೃಕ್ಷದ ದಾಖಲೆಗಳನ್ನು ತಿದ್ದಿರುವ ಆರೋಪ ಕೂಡ ಕೇಳಿಬಂದಿದೆ. ಈ ಪ್ರಕರಣದ ಕುರಿತು ಅಶೋಕ್​ಕುಮಾರ್​ ಎನ್ನುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದ ದೂರು ಈಗ ಕಸದ ಬುಟ್ಟಿ ಸೇರಿದೆ. ತನಗೆ ನ್ಯಾಯ ಕೊಡಿಸಿ ಅಂತಾ ಮಾದಪ್ಪ ಅವರು ಅರ್ಜಿ ಸಲ್ಲಿಸಿದರೂ ಯಾವೊಬ್ಬ ಅಧಿಕಾರಿಯೂ ಕ್ಯಾರೆ ಎಂದಿಲ್ಲ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​​