-ಎಂ ಎನ್‌ ಪ್ರಶಾಂತ್‌ ಕುಮಾರ್‌ ಬೆಂಗಳೂರು
ಪ್ರವಾಸಿ ಭಾರತೀಯ ದಿವಸ್‌ ಕೇವಲ ಉತ್ಸವ­ವಲ್ಲ, ಸಮಾವೇಶವಲ್ಲ. ಜಗದಗಲಕ್ಕೆ ಚದುರಿ ಹೋಗಿರುವ ಭಾರತೀಯ ಮೂಲದ ಜನರಿಗೆ ತಮ್ಮ ಮೂಲ ಬೇರುಗಳನ್ನು ಹಿಂದಿನ ತಲೆಮಾ­ರುಗಳನ್ನು ಅರಿಯುವ ಮಹ­ತ್ತರ ಅವ­ಕಾಶ ಕಲ್ಪಿಸಿದಂತೆ ಕಾಣು​ತ್ತಿದೆ. ಇದಕ್ಕೆ ಕಾರ​ಣವೂ ಇದೆ. ಪ್ರವಾಸಿ ದಿವಸ್‌­ನಲ್ಲಿ ಪಾಲ್ಗೊಂಡಿರುವ ಫ್ರಾನ್ಸ್‌ನ ಮಾರ್ಟಿ­­ನಿಕ್‌ ದ್ವೀಪದ ಡಯಾನಾ ರಾಮಸ್ವಾಮಿ ತಮ್ಮ ಭಾರ­ತೀಯ ಮೂಲದ ಹುಡುಕಾಟವನ್ನು ಸಮಾ​ವೇ​ಶದ ಮೂಲಕ ಆರಂಭಿ​ಸಿ​ದ್ದಾರೆ.

 

ಅದಕ್ಕಾಗಿಯೇ ತಮ್ಮ ಪೂರ್ವ​ಜ​ರು ನೆಲೆ​ಸಿದ್ದ ಪುದು​ಚೇ​ರಿಗೂ ಸದ್ಯದಲ್ಲೇ ಪ್ರಯಾಣ ಬೆಳೆ​ಸ​ಲಿ​ದ್ದಾರೆ. ಅದಕ್ಕೂ ಮೊದಲು, ಕರ್ನಾ​ಟ​ಕ​ದ​ಲ್ಲಿನ ಕಾಫಿ ಘಮಲು ಆಸ್ವಾ​ದಿ​ಸಲು ಚಿಕ್ಕ​ಮ​ಗ​ಳೂ​ರಿಗೆ ಹೊರ​ಟಿ​ದ್ದಾರೆ. 1853ರ ಸುಮಾರಿಗೆ ವೆಸ್ಟ್‌ ಇಂಡೀಸ್‌ ದ್ವೀಪ ರಾಷ್ಟ್ರಗಳಿಂದ ಕೆರಿಬಿಯನ್‌ ಸಾಗರದ ಪೂರ್ವ ಭಾಗದ ಫ್ರಾನ್ಸ್‌ನ 16 ಪ್ರಾಂತ್ಯಗಳಲ್ಲಿ ಒಂದಾದ ಮಾರ್ಟಿನಿಕ್‌ಗೆ ವಲಸೆ ಹೋಗಿರುವ ತಮ್ಮ ತಾತ- ಮುತ್ತಾತಂದಿರ ಮೂಲ ಭಾರತ ಎಂಬುದಷ್ಟೇ ಡಯಾನಾರಿಗೆ ಗೊತ್ತು. ಆದರೆ ತಾವು ತಮಿಳುನಾಡಿನವರೋ, ಪುದುಚೇರಿ​ಯವ​ರೋ ಅಥವಾ ಇನ್ನಾವ ರಾಜ್ಯದವರೋ ಎಂಬುದು ಗೊತ್ತಿಲ್ಲ.

ಇವರ ವಂಶಾವಳಿ ಕುರಿತಾಗಿ ಫ್ರಾನ್ಸ್‌ ನಲ್ಲಿ ಯಾವುದೇ ಪತ್ರಾಗಾರ​(ಆರ್ಕೈವ್ಸ್) ಇಲ್ಲ. ಸುಮಾರು 25 ಸಾವಿರದಷ್ಟುಭಾರತ ಮೂಲದವರು ಮಾರ್ಟಿ​ನಿ​ಕ್‌​ನ​ಲ್ಲಿ​ದ್ದಾ​ರಂತೆ. ಆದರೆ ಇವರಲ್ಲಿ ಅನೇಕರಿಗೆ ತಾವು ಭಾರತದ ಯಾವ ಪ್ರದೇ​ಶ​ದ​ವರು ಎಂಬುದು ಗೊತ್ತೇ ಇಲ್ಲ. ‘‘ಮಾರ್ಟಿನಿಕ್‌ನಲ್ಲಿನ್ನೂ ಭಾರತೀ​ಯತೆ ಜೀವಂತವಾಗಿದೆ. ಭಾರತದ ಯೋಗ, ಭರತ­ನಾಟ್ಯ, ಇಲ್ಲಿನ ಹೋಳಿ ಹುಣ್ಣಿಮೆಗಳನ್ನೂ ಆಚರಿಸ­ಲಾಗುತ್ತದೆ. ಅಂತಾರಾಷ್ಟ್ರೀಯ ಯೋಗ ದಿನಾಚ­ರಣೆ ಅಲ್ಲಿಯೂ ಬೃಹತ್ತಾಗಿ ಆಯೋಜ­ನೆ­ ಯಾ­ಗಿತ್ತು,​'​' ಎನ್ನು​ತ್ತಾರೆ ಡಯಾನಾ.

ಈ ಹಿನ್ನೆ​ಲೆ​ಯಲ್ಲಿ ಸ್ವತ: ಡಯಾನಾ ತಮ್ಮ ಮೂಲ ಹುಡು​ಕು​ವ ಪ್ರಯ­ತ್ನದಲ್ಲಿ ತೊಡಗಿದ್ದಾರೆ. ಇದೇ ಮೊಟ್ಟಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿ­ರುವ ಅವರು ಮೊದಲಿಗೆ ತಮ್ಮ ವೃತ್ತಿಯಾದ ಕಾಫಿ ತೋಟ­ಗಳತ್ತ ಗಮನಹರಿಸಲಿದ್ದಾರೆ. ಚಿಕ್ಕ­ಮಗ­ಳೂರಿನ ಕಾಫಿ ತೋಟಗಳ ಕುರಿತು ಅಂತ­ರ್ಜಾ­ಲದಲ್ಲಿ ಮಾಹಿತಿ ತಿಳಿದುಕೊಂಡಿರುವ ಅವರು ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತಿ­ರುವ ಹಳ್ಳಿ ಬೆರ್ರಿ(ಕಂಬಿಹಳ್ಳಿ) ಎಸ್ಟೇಟ್‌ಗೆ ಭೇಟಿ ನೀಡುತ್ತಿದ್ದಾರೆ.

ತಮಿಳು ಬರೆಯುವಂತಿಲ್ಲ!: ಭಾರತೀಯ ಮೂಲದ ನಿವಾಸಿಗಳು ಮಾರ್ಟಿನೀಕ್‌ನಲ್ಲಿ ಸಾಧನೆ ಮೆರೆದಿದ್ದಾರೆ. ಎಲ್ಲ ಕಡೆಗಳಲ್ಲೂ ಇವರು ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಆಡಳಿತ ವ್ಯವಸ್ಥೆ, ರಾಜಕೀಯ ನಾಯಕರೂ ಆಗಿದ್ದಾರೆ. ಫ್ರಾನ್ಸ್‌ನ ಅಭಿ​ವೃ​ದ್ಧಿ​ಯಲ್ಲಿ ಇವರು ಪಾಲುದಾರಾಗಿದ್ದಾರೆ. ಆದರೆ ಇಲ್ಲಿ ತಮಿಳು ಬರವಣಿಗೆಗೆ ನಿಷಿದ್ಧವಿದೆ. ತಮಿಳು ಮಾತನಾ ಡಬಹುದು. ಭಾರತೀಯ ಮೂಲದವರ ಕುರಿತು ಇನ್ನೂ ಇಲ್ಲಿ ಸಂಕುಚಿತ ಮನೋಭಾವವಿದೆ. ದ್ವೀಪದಲ್ಲಿದ್ದ ಗಾಂಧೀಜಿ ಪ್ರತಿಮೆ ಯನ್ನು ದುಷ್ಕರ್ಮಿಗಳು ಹಾಳುಗೆಡವಿದ್ದ ಬಗ್ಗೆ ಡಯಾನ ಸೇರಿದಂತೆ ಇಲ್ಲಿನ ಭಾರತೀಯ ಮೂಲದವರಿಗೆ ಅಪಾರ ನೋವಿದೆ. ಅವರ ಅಹಿಂಸಾ ತತ್ವಗಳನ್ನು ಇಲ್ಲೂ ಪಸರಿಸುವ ಉದ್ದೇಶ ಡಯಾನಾರದ್ದು.

(ಕನ್ನಡ ಪ್ರಭ)