ಸೋಲ್: ಹೋಟೆಲ್‌ಗಳಲ್ಲಿ ರಹಸ್ಯ ಕ್ಯಾಮೆರಾ ಅಡಗಿಸಿಟ್ಟು ಸಾವಿರಾರು ವ್ಯಕ್ತಿಗಳ ಖಾಸಗಿ ಜೀವನದ ದೃಶ್ಯಗಳನ್ನು ಸೆರೆಹಿಡಿದ ನಾಲ್ವರನ್ನು ದಕ್ಷಿಣ ಕೊರಿಯಾದ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರು, ರಾಜಧಾನಿ ಸೋಲ್‌ನ 30 ಹೋಟೆಲ್‌ಗಳ 42 ರೂಂಗಳ ಟಿವಿ ಸೆಟ್ ಟಾಪ್ ಬಾಕ್ಸ್, ಹೇರ್‌ಡ್ರೈಯರ್ ಕ್ರಾಡಲ್‌ಗಳಲ್ಲಿ ರಹಸ್ಯ ಕ್ಯಾಮೆರಾ ಅಡಗಿಸಿಡುತ್ತಿದ್ದರು. ಅದನ್ನು ಬೇಕಾದ ಚಾಲು ಮಾಡಿ, ವಿಡಿಯೋಗಳನ್ನು ವಿದೇಶಗಳ ಅಶ್ಲೀಲ ತಾಣಗಳಿಗೆ ಮಾರಾಟ ಮಾಡುತ್ತಿದ್ದರು. 

ಇದಕ್ಕಾಗಿ ಅವರು ಭಾರೀ ಪ್ರಮಾಣದ ಹಣ ಪಡೆಯುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ನಾಲ್ವರ ಪೈಕಿ ಒಬ್ಬ ಆರೋಪಿ, ಗ್ರಾಹಕನ ರೀತಿ ಹೋಟೆಲ್‌ಗೆ ಬಂದು ಕ್ಯಾಮೆರಾಗಳನ್ನು ಅಳವಡಿಹೋಗಿದ್ದ ಎಂಬುದು ಬೆಳಕಿಗೆ ಬಂದಿದೆ.