ವಿದ್ಯಾರ್ಥಿ ಕಾಂಗ್ರೆಸ್ ನ ನಾಲ್ವರು ಅಮಾನತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 1:12 PM IST
Four NSUI Leaders suspended
Highlights

ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ, ಬೇಜವಾಬ್ದಾರಿ ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ ನಾಲ್ವರು NSUI ಪದಾಧಿಕಾರಿಗಳನ್ನು ಅವರ ಸ್ಥಾನಗಳಿಂದ ಅಮಾನತು ಮಾಡಲಾಗಿದೆ.
 

ಬೆಂಗಳೂರು :  ಕಾಂಗ್ರೆಸ್‌ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನ ರಾಜ್ಯ ಕಾರ್ಯಕಾರಿ ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ, ಬೇಜವಾಬ್ದಾರಿ ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ ನಾಲ್ವರು ಪದಾಧಿಕಾರಿಗಳನ್ನು ಅವರ ಸ್ಥಾನಗಳಿಂದ ಅಮಾನತು ಮಾಡಲಾಗಿದೆ.

ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿಗಳಾದ ಎನ್‌.ಆರ್‌. ನವೀನ್‌, ಸತೀಶ್‌ ನಾಯಕ, ಪ್ರಧಾನ ಕಾರ್ಯದರ್ಶಿ ಎನ್‌.ಅರುಣ್‌ ಕುಮಾರ್‌ ಮತ್ತು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಚೇತನ್‌ ಹೊಂಗಲ್‌ ಅವರನ್ನು ಕಳೆದ ಆರು ತಿಂಗಳಿಂದ ರಾಜ್ಯ ಘಟಕದ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಳ್ಳದೆ ಬೇಜವಾಬ್ದಾರಿ ತೋರಿದ್ದಾರೆ. 

ಅಲ್ಲದೆ, ಘಟಕದ ಯಾವುದೇ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿ ಈ ನಾಲ್ವರನ್ನು ಮುಂದಿನ ಆದೇಶದ ವರೆಗೆ ಅವರ ಸ್ಥಾನಗಳಿಂದ ಅಮಾನತು ಮಾಡಲಾಗಿದೆ ಎಂದು ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಾಹುಲ್‌ ಮಮ್ಕೂಟಥಿಲ್‌ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loader