ನಾಲ್ಕು ವಷರ್ಷದ ಮಗುವಿಗೆ ಉಸಿರಾಟದ ತೊಂದರೆ! ಇಂಡಿಗೋ ವಿಮಾನದಲ್ಲೇ ಪ್ರಾಣಬಿಟ್ಟ ಮಗು! ಬೆಂಗಳೂರು-ಪಾಟ್ನಾ ಇಂಡಿಗೋ ವಿಮಾನ! !ಹೈದರಾಬಾದ್ ಏರ್‌ಪೋರ್ಟ್ ನಲ್ಲಿ ಘಟನೆ 

ಹೈದರಾಬಾದ್(ಆ.1): ಉಸಿರಾಟದ ತೊಂದರೆಯಿಂದಾಗಿ ನಾಲ್ಕು ತಿಂಗಳ ಗಂಡು ಮಗುವೊಂದು ವಿಮಾನದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದಾಗ ಮಗು ಮೃತಪಟ್ಟಿದೆ.

ವಿಮಾನ ಹೈದರಾಬಾದ್‌ನತ್ತ ಪ್ರಯಾಣ ಬೆಳೆಸಿದಾಗ ಮಾರ್ಗ ಮಧ್ಯೆಯೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ವಿಮಾನದ ಸಿಬ್ಬಂದಿ ಹೈದರಾಬಾದ್ ವಿಮಾನ ನಿಲ್ದಾಣದ ಸಿಬ್ಬಂದಿಗೆ ಕರೆ ಮಾಡಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ವಿಮಾನ ಹೈದರಾಬಾದ್ ತಲುಪುತ್ತಿದ್ದಂತೇ ಮಗು ಮೃತಪಟ್ಟಿದೆ.

ಮಗುವಿನ ತಂದೆ ಸಂದೀಪ್ ಕುಮಾರ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದು, ಕುಟುಂಬ ಸಮೇತ ಪಾಟ್ನಾಗೆ ತೆರಳುತ್ತಿದ್ದರು. ಸಂದೀಪ್ ಅವರ ನಾಲ್ಕು ತಿಂಗಳ ಗಂಡು ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಪರಿಣಾಮವಾಗಿಯೇ ವಿಮಾನವನ್ನು ಹೈದರಾಬಾದ್‌ನತ್ತ ತಿರುಗಿಸಲಾಗಿತ್ತು ಎಂದು ಇಂಡಿಗೋ ವಿಮಾನ ಸಂಸ್ಥೆ ಮೂಲಗಳು ತಿಳಿಸಿವೆ. 

ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದು, ಮಗುವಿನ ಮೂಗಿನಿಂದ ರಕ್ತ ಸೋರುತ್ತಿತ್ತು ಎಂದು ಹೈದರಾಬಾದ್ ವಿಮಾನ ನಿಲ್ದಾಣದ ವೈದ್ಯರು ಸ್ಪಷ್ಟಪಡಿಸಿದ್ದಾರೆ.