ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಿಬಿಐ ಅಂತರ್ಯುದ್ಧ! ಕಡ್ಡಾಯ ರಜೆ ಮೇಲಿರುವ ಸಿಬಿಐ ಉನ್ನತ ಅಧಿಕಾರಿಗಳು! ಅಲೋಕ್ ವರ್ಮಾ ಮನೆ ಓಡಾಡುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳ ಬಂಧನ!ವರ್ಮಾ ಚಟುವಟಿಕೆ ಗಮನಿಸುತ್ತಿದ್ದ ಆರೋಪದ ಮೇಲೆ ನಾಲ್ವರು ವ್ಯಕ್ತಿಗಳ ಬಂಧನ
ನವದೆಹಲಿ(ಅ.25): ಸಿಬಿಐ ಉನ್ನತ ಅಧಿಕಾರಿಗಳ ನಡುವಿನ ಜಟಾಪಟಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಡ್ಡಾಯ ರಜೆ ಮೇಲಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ನಿವಾಸದ ಮುಂದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜನ್ ಪಥ್ ಬಳಿಯಿರುವ ವರ್ಮಾ ಅವರ ಮನೆಯ ಮುಂದೆ ನಾಲ್ವರು ವ್ಯಕ್ತಿಗಳು ಅನುಮಾಸ್ಪದವಾಗಿ ಓಡಾಡುತ್ತಿರುವುದನ್ನು ಭದ್ರತಾ ಪಡೆಗಳು ಗಮನಿಸಿದ್ದಾರೆ. ಬಳಿಕ ನಾಲ್ವರನ್ನೂ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಮನೆಯ ಬಳಿಯೇ ಇದ್ದ ವ್ಯಕ್ತಿಗಳು ವರ್ಮಾ ಅವರ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದರು ಎನ್ನಲಾಗಿದೆ. ಸದ್ಯ ನಾಲ್ವರೂ ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
