ಇಂದು 4 ಲೋಕಸಭೆ, 10 ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ

Four Lok Sabha seats and 10 assembly constituencies are voting today in the crucial by-elections in 10 states.
Highlights

ದೇಶದ ಒಟ್ಟು 10 ರಾಜ್ಯಗಳಲ್ಲಿ ಇಂದು ನಾಲ್ಕು ಲೋಕಸಭಾ ಸ್ಥಾನ ಮತ್ತು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಚುನಾವಣೆ ನಡೆಯುತ್ತಿದೆ. ಉತ್ತರಪ್ರದೇಶದ ಕೈರಾನಾ, ಮಹಾರಾಷ್ಟ್ರದ ಪಾಲ್ಗಾರ್, ಭಂಡಾರಾ-ಗೊಂಡಿಯಾ ಹಾಗೂ ನಾಗಾಲ್ಯಾಂಡ್ ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.

ನವದೆಹಲಿ(ಮೇ.28): ದೇಶದ ಒಟ್ಟು 10 ರಾಜ್ಯಗಳಲ್ಲಿ ಇಂದು ನಾಲ್ಕು ಲೋಕಸಭಾ ಸ್ಥಾನ ಮತ್ತು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಚುನಾವಣೆ ನಡೆಯುತ್ತಿದೆ. ಉತ್ತರಪ್ರದೇಶದ ಕೈರಾನಾ, ಮಹಾರಾಷ್ಟ್ರದ ಪಾಲ್ಗಾರ್, ಭಂಡಾರಾ-ಗೊಂಡಿಯಾ ಹಾಗೂ ನಾಗಾಲ್ಯಾಂಡ್ ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಕೈರಾನಾ ಬಿಜೆಪಿ ಪಾಲಿಗೆ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಇಲ್ಲಿಂದ ಈ ಹಿಂದೆ ಆಯ್ಕೆಯಾಗಿದ್ದ ಹುಕುಮ್ ಸಿಂಗ್ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಹುಕುಮ್ ಸಿಂಗ್ ಅವರ ಅಕಾಲಿಕ ನಿಧನದಿಂದಾಗಿ ಈ ಸ್ಥಾನ ತೆರವಾಗಿದ್ದು, ಅವರ ಪುತ್ರಿ ಮೃಗಾಂಕಾ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪಧಿರ್ಧಿಸುತ್ತಿದ್ದಾರೆ. ಇನ್ನು  ಭಂಡಾರಾ-ಗೊಂಡಿಯಾದ ಬಿಜೆಪಿ ಸಂಸದ ನಾನಾ ಪಟೋಲೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾಣೆ ನಡೆಯುತ್ತಿದೆ.

ನಾಗಾಲ್ಯಾಂಡ್ ನ ನೈಫ್ಯೂ ರಿಯೋ ಸಿಎಂ ಆದ ಕಾರಣ ತಮ್ಮ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಇದೇ ವೇಳೆ ಕೇರಳ, ಬಿಹಾರ, ಮೇಘಾಲಯ ವಿಧಾನಸಭೆಗೆ ಇಂದು ಉಪಚುನಾವಣೆ ನಡೆಯುತ್ತಿದೆ. 

loader