ತಾಲೂಕಿನ ನಲ್ಲೂರು ಪಾಲಾ ಗ್ರಾಮದ ಬಳಿ ಅತೀ ವೇಗವಾಗಿ ಬಂದ ಟವೇರಾ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಮೈಸೂರು(ಮಾ.25): ಹುಣುಸೂರು ಬಳಿ ಭೀಕರ ಅಪಘಾತವಾಗಿ ಬೆಂಗಳೂರಿನ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತಪಟ್ಟವರು ಬೆಂಗಳೂರಿನ ಹೊಸಕೆರೆಹಳ್ಳಿಯ ನಿವಾಸಿಗಳಾಗಿದ್ದಾರೆ. ತಾಲೂಕಿನ ನಲ್ಲೂರು ಪಾಲಾ ಗ್ರಾಮದ ಬಳಿ ಅತೀ ವೇಗವಾಗಿ ಬಂದ ಟವೇರಾ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.